ಅಮೆರಿಕದ ಜನಪ್ರಿಯ ಗಾಯಕ, ರ‍್ಯಾಪರ್, ಫ್ಯಾಷನ್ ಡಿಸೈನರ್, ಉದ್ಯಮಿ ಇನ್ನೂ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಕಾನ್ಯೆ ವೆಸ್ಟ್ ಮೇಲೆ ಅವರ ಮಾಜಿ ಸಹಾಯಕಿ ಲಾರೆನ್ ಪಿಸ್ಕಾಟ್ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.
ಕಾನ್ಯೆಯ ವಿಡಿಯೋ ಹಾಗೂ ಕಾನ್ಯೆ ತಮಗೆ ಕಳಿಸಿರುವ ಅಶ್ಲೀಲ ಸಂದೇಶಗಳನ್ನು ಸಹ ಆಕೆ ಬಿಡುಗಡೆ ಮಾಡಿದ್ದಾರೆ. ಕಾನ್ಯೆ ವೆಸ್ಟ್, ತಮಗೆ ಅಶ್ಲೀಲ ವಿಡಿಯೋಗಳನ್ನು, ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದ ಎಂದು ಲಾರೆನ್ ಆರೋಪ ಮಾಡಿದ್ದಾರೆ.
ಕಾನ್ಯೆ ವೆಸ್ಟ್, ಮುಷ್ಠಿ ಮೈಥುನ ಮಾಡುವಾಗ ತಮಗೆ ಕರೆ ಮಾಡುತ್ತಿದ್ದ. ಕರೆ ಮಾಡಿ ನಾನು ಈಗ ಏನು ಮಾಡುತ್ತಿದ್ದೀನಿ ಊಹಿಸು ಎಂದು ಕೇಳುತ್ತಿದ್ದ, ಅಲ್ಲದೆ ನನ್ನ ಬಾಯ್ಫ್ರೆಂಡ್ಗಳ ಖಾಸಗಿ ಅಂಗದ ಅಳತೆ ಇನ್ನಿತರೆ ವಿಷಯಗಳ ಬಗ್ಗೆ ಅಶ್ಲೀಲವಾಗಿ ನನ್ನ ಬಳಿ ವಿಚಾರಿಸುತ್ತಿದ್ದ ಎಂದು ಲಾರೆನ್ ಆರೋಪ ಮಾಡಿದ್ದಾರೆ. ಲಾರೆನ್ಗೆ ತೀರ ಅಶ್ಲೀಲ ಸಂದೇಶಗಳನ್ನು ಕಾನ್ಯೆ, ಲಾರೆನ್ಗೆ ಕಳಿಸಿದ್ದು ಆ ಸಂದೇಶಗಳನ್ನು ಲಾರೆನ್ ಮಾಧ್ಯಮಗಳ ಬಳಿ ಹಂಚಿಕೊಂಡಿದ್ದಾರೆ. ಕಾನ್ಯೆ, ಲಾರೆನ್ ಬಳಿ ಲೈಂಗಿಕತೆಗೆ ಸಂಬಂಧಿಸಿದಂತೆ ಚಿತ್ರ-ವಿಚಿತ್ರ ಬೇಡಿಕೆಗಳನ್ನು ಇಟ್ಟಿರುವುದು ಈಗ ಬಿಡುಗಡೆ ಮಾಡಲಾಗಿರುವ ಸಂದೇಶಗಳಿಂದ ಗೊತ್ತಾಗಿದೆ. ಕಾನ್ಯೆ, ಕೆಲವು ಮಾಡೆಲ್ಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿ ಅದನ್ನು ವಿಡಿಯೋ ಮಾಡಿಕೊಂಡು ಲಾರೆನ್ಗೆ ಕಳಿಸಿದ್ದ ಎಂಬ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ.

