ಮೈಸೂರು : ಮಾಜಿ ಸಂಸದನಿಂದ ಕಾಂತಾರ ಟಿಕೆಟ್ ಬುಕ್ ಮಾಡಲಾಗಿದೆ. ಕಾಂತಾರ ಮೂವೀ ಪ್ರಮೋಷನ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಮುಂದಾದರು. ನಟ ರಿಷಬ್ ಶೆಟ್ಟಿ ಸಿನಿಮಾ ಪರ ಪ್ರತಾಪ್ ಸಿಂಹ ನಿಂತರು.
ಕಾಂತಾರ ಮೂವೀ ನೋಡಲು ಪ್ರತಾಪ್ ಸಿಂಹ ಫ್ರೀ ಟಿಕೆಟ್ ಆಫರ್ ನೀಡಿದ್ದು, ಕಾರ್ಯಕರ್ತರೆಲ್ಲಾ ಒಡಗೂಡಿ ಕಾಂತಾರ ನೋಡೋಣ ಎಂದು ಫ್ರೀ ಟಿಕೆಟ್ ಆಫರ್ ನೀಡಿದ್ದಾರೆ. ಸಿನಿಮಾಗೆ ಬನ್ನಿ ಎಂದು ಪ್ರತಾಪ್ ಸಿಂಹ ಕರೆ ಕೊಟ್ಟರು.
ಎಲ್ಲರಿಗೂ ಟಿಕೆಟ್ ಬುಕ್ ಮಾಡಿದ್ದೇನೆ ಕಾಂತಾರಗೆ ಬನ್ನಿ ಎಂದು ಪೋಸ್ಟ್ ಹಾಕಿದರು. ಕಾರ್ಯಕರ್ತರು, ಅಭಿಮಾನಿಗಳಿಗಾಗಿ ಮಾಜಿ ಸಂಸದ ಕಾಂತಾರ ಟಿಕೆಟ್ ಬುಕ್ ಮಾಡಿದರು. ಎಲ್ಲರೂ ಸಿನಿಮಾಗೆ ಬನ್ನಿ ಟಿಕೆಟ್ ಬುಕ್ ಮಾಡಿದ್ದೇನೆ ಎಂದ ಪ್ರತಾಪ್ ಸಿಂಹ ಹೇಳಿದರು.
ತನ್ನ ಫೇಸ್ಬುಕ್‌ನಲ್ಲಿ ಟಿಕೆಟ್ ಬುಕ್ ಮಾಡಿರುವ ಬಗ್ಗೆ ಪ್ರತಾಪ್ ಸಿಂಹ ಪೋಸ್ಟ್ ಹಾಕಿದರು. ಮೈಸೂರಿನ ಡಿಆರ್ಸಿ ಸಿನಿಮಾಸ್‌ನಲ್ಲಿ ಟಿಕೆಟ್ ಬುಕ್ ಮಾಡಲಾಗಿದೆ. 68920/- ರೂಪಾಯಿ ನೀಡಿ ಪ್ರತಾಪ್ ಸಿಂಹ ಟಿಕೆಟ್ ಬುಕ್ ಮಾಡಿದರು.
ನಾಳೆ ಸಂಜೆ 4 ಗಂಟೆಯ ಫುಲ್ ಷೋ ವನ್ನು ಪ್ರತಾಪ್ ಸಿಂಹ ಬುಕ್ ಮಾಡಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಬನ್ನಿ ಕಾಂತಾರ ಸಿನಿಮಾ ನೋಡೋಣ ಎಂದು ಮಾಜಿ ಸಂಸದ ಕರೆದಿದ್ದಾರೆ.

