ಕನ್ನಡದ ನಟಿ ರೂಪಿಕಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂಕಿತ್ ಎಂಬುವರ ಜೊತೆಗೆ ನಟಿ ರೂಪಿಕಾ ಮದುವೆ ನೆರವೇರಿದೆ. ಬಾಲನಟಿಯಾಗಿ ಕಿರುತೆರೆ ಧಾರಾವಾಹಿಗಳಲ್ಲಿ ಮಿಂಚಿದ ರೂಪಿಕಾ ಅವರು ಭರತನಾಟ್ಯ ಕಲಾವಿದೆ. ಈಗಾಗಲೇ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ ರೂಪಿಕಾ ಈಗ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ಎಸ್‌.ನಾರಾಯಣ್‌ ನಿರ್ದೇಶನದ ‘ಚೆಲುವಿನ ಚಿಲಿಪಿಲಿ’ ಚಿತ್ರದ ಮೂಲಕ ರೂಪಿಕಾ ಹಿರಿತೆರೆಗೆ ಪದಾರ್ಪಣೆ ಮಾಡಿದರು. ಬಳಿಕ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ದೊರೆಸಾನಿ’ ಧಾರಾವಾಹಿಯಲ್ಲಿ ದೀಪಿಕಾ ಪಾತ್ರದಲ್ಲಿ ನಟಿಸಿದ್ದರು. ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸಿಂಚನಾ ಪಾತ್ರದಲ್ಲಿ ನಟಿಸಿದ್ದರು.

ಆದರೆ ಕೆಲವು ದಿನಗಳ ಹಿಂದೆ ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ನಟಿ ರೂಪಿಕಾ ಹೊರನಡೆದಿದ್ದರು. ಇನ್ನು, ರೂಪಿಕಾ ಅವರ ಮದುವೆಗೆ ಹಿರಿಯ ನಟಿಯರಾದ ತಾರಾ, ಅಂಜಲಿ, ಅಭಿನಯ, ಸುಶ್ಮಿತಾ ಜಗಪ್ಪ, ಹೆಚ್‌.ಡಿ ಕುಮಾರಸ್ವಾಮಿ ಸೇರಿದಂತೆ ಕಿರುತೆರೆ ಕಲಾವಿದರು ಆಗಮಿಸಿ, ನವ ಜೋಡಿಗೆ ಶುಭ ಹಾರೈಸಿದ್ದಾರೆ.