ಚಂಡೀಗಢ: ನೂತನ ಸಂಸದೆಯಾದ ಕಂಗನಾ ರಾಣಾವತ್ ಅವರು ಭದ್ರತೆಯನ್ನು ಮೀರಿ ಮೊಬೈಲ್ ಕೈಯಲ್ಲೇ ಹಿಡಿದು ತೆರಳೋದಕ್ಕೆ ವಿಮಾನ ನಿಲ್ದಾಣದಲ್ಲಿ ಮುಂದಾಗಿದ್ದಾರೆ. ಈ ವೇಳೆ ಪೊಲೀಸ್ ಪೇದೆಯೊಂದಿಗೆ ಕಿರಿಕ್ ತೆಗೆದಿದ್ದಾರೆ. ಆ ಬಳಿಕ ವಾಗ್ವಾದ ನಡೆದಿದೆ. ಈ ವೇಳೆಯಲ್ಲಿ ನೂತನ ಸಂಸದೆ ಕಂಗನಾ ರಾಣಾವತ್ ಗೆ ಪೊಲೀಸ್ ಪೇದೆ ಕಪಾಳ ಮೋಕ್ಷ ಮಾಡಿರೋದಾಗಿ ತಿಳಿದು ಬಂದಿದೆ.

ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಸೇರಿದ ಮಹಿಳಾ ಸಿಬ್ಬಂದಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೊಂದು ವೈರಲ್‌ ಆಗ್ತಿದೆ.

— Prayag (@theprayagtiwari) June 6, 2024