ಮುಂಬೈ: ಕಂಗನಾ ರಣಾವತ್ ಎಮರ್ಜೆನ್ಸಿ ಬಿಡುಗಡೆಗೆ ಸಿದ್ಧರಾಗಿದ್ದಾರೆ ಮತ್ತು ಚಿತ್ರದ ಮಾರ್ಕೆಟಿಂಗ್ ಸಮಯದಲ್ಲಿ ತನಗೆ ಬೆದರಿಕೆ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಪೊಲೀಸರನ್ನು ಕೇಳಿಕೊಂಡಿದ್ದಾರೆ.

ಕಂಗನಾ ರನೌತ್, ‘ಎಮರ್ಜೆನ್ಸಿ’ ಸಿನಿಮಾ ನಿರ್ಮಾಣ ಮಾಡಿದ್ದು, ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಆದರೆ ಸಿನಿಮಾ ಬಿಡುಗಡೆ ಮಾಡಬಾರದೆಂದು ಕೆಲವರು ಒತ್ತಾಯ ಮಾಡಿದ್ದು, ಕೊಲೆ ಬೆದರಿಕೆಗಳು ಸಹ ಬಂದಿವೆ.

ನಟಿ ಕಂಗನಾ ಸ್ವತಃ ಈ ಕೊಲೆ ಬೆದರಿಕೆ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಸಿಖ್ ಸಮುದಾಯದ ಕೆಲ ವ್ಯಕ್ತಿಗಳು ಕೋಣೆಯೊಂದರಲ್ಲಿ ಕುಳಿತು ವಿಡಿಯೋ ಮಾಡಿದ್ದು, ವಿಡಿಯೋನಲ್ಲಿ ಕಂಗನಾರನ್ನು ಉದ್ದೇಶಿಸಿ ಮಾತನಾಡಿರುವ ಒಬ್ಬ ವ್ಯಕ್ತಿ, ‘ಒಂದೊಮ್ಮೆ ನೀನು ಈ ಸಿನಿಮಾ ಬಿಡುಗಡೆ ಮಾಡಿದರೆ ಪಂಜಾಬಿಯರಿಂದ ಹೇಗಾದರೂ ಚಪ್ಪಲಿಯಲ್ಲಿ ಹೊಡೆತ ತಿಂದೇ ತಿನ್ನುತ್ತೀಯ ಮಾತ್ರವಲ್ಲದೆ, ಕ್ರಿಶ್ಚಿಯನ್, ಮುಸ್ಲಿಂ ಇತರೆ ಹಿಂದೂಗಳು ಸಹ ನಿನ್ನನ್ನು ಚಪ್ಪಲಿಯಿಂದ ಸ್ವಾಗತ ಮಾಡಲಿದ್ದಾರೆ’ ಎಂದಿದ್ದಾರೆ.

ಅದೇ ವಿಡಿಯೋನಲ್ಲಿ ಇನ್ನೊಬ್ಬ ಪಂಜಾಬಿ ವ್ಯಕ್ತಿ ಮಾತನಾಡಿ, ‘ಸಿನಿಮಾದಲ್ಲಿ ಒಂದೊಮ್ಮೆ ಜರ್ನಲ್ ಸಿಂಗ್ ಬಿಂದಾರ್ನ್​ವಾಲೆ ಅವರನ್ನು ಭಯೋತ್ಪಾದಕ ಎಂದು ನೀನು ತೋರಿಸಿದ್ದರೆ, ನೆನಪಿರಲಿ, ನೀನು ಯಾರ ಬಗ್ಗೆ ಸಿನಿಮಾ ಮಾಡುತ್ತಿದ್ದೀಯೋ ಅವರ ಗತಿ ಏನಾಯ್ತು ಎಂಬುದು (ಇಂದಿರಾ ಗಾಂಧಿ) ಅದೇ ಗತಿ ನಿನಗೂ ಆಗುತ್ತದೆ. ಅವರಿಗಾಗಿ ನಾವು ತಲೆ ಕಡಿಸಿಕೊಳ್ಳಲು ತಯಾರಿದ್ದೀವಿ ಹಾಗೆಯೇ ತಲೆ ಕಡಿಯಲು ಸಹ ತಯಾರಾಗುತ್ತೀವಿ’ ಎಂದಿದ್ದಾರೆ.

The actress took to her social media account to request Maharashtra, Punjab & Himachal Pradesh to take action against the accused.

Why everyone is silent on this,Even BJP is also leaving her alone like they did with Nupur Sharma.#KanganaRanaut pic.twitter.com/0Zd1IHeVnS

— Aparna Mishra (Mishu) (@jaalim_chori) August 26, 2024

ಸಿಖ್ ಸಮುದಾಯ, ಕಂಗನಾ ರನೌತ್​ರ ‘ಎಮರ್ಜೆನ್ಸಿ’ ಸಿನಿಮಾಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇಂದಿರಾ ಗಾಂಧಿಯ ಹತ್ಯೆಯನ್ನು ಸಿಖ್ ಸಮುದಾಯಕ್ಕೆ ಸೇರಿದ ಅವರ ಬಾಡಿಗಾರ್ಡ್​ಗಳೇ ಮಾಡಿದ್ದರು. ಇಂದಿರಾ ಗಾಂಧಿ, ‘ಬ್ಲೂ ಸ್ಟಾರ್ ಆಪರೇಷನ್’ ಮಾಡಿ ಅಮೃತ್​ಸರದ ಗೋಲ್ಡನ್​ ಟೆಂಪಲ್​ನಲ್ಲಿ ನುಸುಳಿದ್ದ ಕೆಲವು ಪ್ರತ್ಯೇಕತವಾದಿಗಳನ್ನು ಕೊಲ್ಲಿಸಿದ್ದರು. ಇದೇ ಕಾರಣಕ್ಕೆ ಇಂದಿರಾ ಗಾಂಧಿಯವರ ಹತ್ಯೆ ಮಾಡಲಾಗಿತ್ತು. ಈಗ ಕಂಗನಾ, ಇಂದಿರಾ ಗಾಂಧಿಯ ಕುರಿತು ಸಿನಿಮಾದಲ್ಲಿ ‘ಬ್ಲೂ ಸ್ಟಾರ್ ಆಪರೇಷನ್’ ಘಟನೆಯ ಪ್ರಸ್ತಾಪ ಆಗಲಿದ್ದು, ಪ್ರತ್ಯೇಕವಾದಿಗಳನ್ನು ಭಯೋತ್ಪಾದಕರಂತೆ ತೋರಿಸುವ ಸಾಧ್ಯತೆ ಇರುವ ಕಾರಣ ಈ ಸಿನಿಮಾಕ್ಕೆ ಸಿಖ್ ಸಮುದಾಯದ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.