ನವದೆಹಲಿ : ಪ್ರಭಾಸ್‌, ಅಮಿತಾಭ್‌ ಬಚ್ಚನ್‌, ದೀಪಿಕಾ ಪಡುಕೋಣೆ, ಕಮಲ್‌ ಹಾಸನ್‌ ಸೇರಿದಂತೆ ನಟಿಸಿರುವ ʼಕಲ್ಕಿ 2898ʼ ಚಿತ್ರ ಜೂನ್‌ 27 ಬಿಡುಗಡೆಯಾಗಿದ್ದು, ಮೂರೇ ದಿನದಲ್ಲಿ ರೂ 415 ಕೋಟಿ ಗಳಿಕೆ ಮಾಡಿದೆ.

ಮಹಾಭಾರತ ಮತ್ತು ವೈಜ್ಞಾನಿಕ ಕಾದಂಬರಿಗಳ ಮಿಶ್ರಣದ ರೂ 600 ಕೋಟಿ ವೆಚ್ಚದ ಈ ಚಿತ್ರವನ್ನು ವೈಜಯಂತಿ ಮೂವೀಸ್‌ ನಿರ್ಮಿಸಿದೆ. ಕಳೆದ ಶುಕ್ರವಾರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಚಿತ್ರದ ಗಳಿಕೆ ಕುರಿತು ನಿರ್ದೇಶಕ ನಾಗ್‌ ಅಶ್ವಿನ್‌ ಸಾಮಾಜಿಕ ಜಾಲಾತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ʻಬಲವನ್ನು ತಡೆಯಲಾಗುದುʼ ಎಂದು ಬರೆದುಕೊಂಡಿದ್ದಾರೆ.