ಬೆಂಗಳೂರು: ಅತ್ಯತ್ತಮ ನಟರಾದ ಪ್ರಭಾಸ್‌, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿರುವ ‘ಕಲ್ಕಿ 2898 AD’ (Kalki 2898 AD) ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಭಾರೀ ನಿರೀಕ್ಷೆಯ ಬಳಿಕ, ವೈಜ್ಞಾನಿಕ ಕಾಲ್ಪನಿಕ ಮಹಾಕಾವ್ಯ ‘ಕಲ್ಕಿ 2898 AD’ ಚಿತ್ರದ ಎರಡು ನಿಮಿಷ ಮತ್ತು ಐವತ್ತೊಂದು ಸೆಕೆಂಡ್‌ಗಳ ಟ್ರೇಲರ್‌ ಬಿಡುಗಡೆ ಆಗಿದೆ. ವಿಎಫ್‌ಎಕ್ಸ್‌ನಿಂದಲೇ ನೋಡುಗರ ಗಮನ ಸೆಳೆದ ಈ ಸಿನಿಮಾ ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಇದೀಗ ಟ್ರೇಲರ್‌ ಸಹ ಎಲ್ಲ ಭಾಷೆಗಳಲ್ಲಿ ಹೊರಬಂದಿದೆ.