ಹೊಸ ತುಳು ಸಿನಿಮಾ ಕಜ್ಜ. ಸಂಪೂರ್ಣ ಕುಟುಂಬ ಮನೋರಂಜನೆಯ ಚಿತ್ರವಾಗಿದ್ದು, ಈ ಸಿನಿಮಾ ಹೇಳೋದು ನಮ್ಮ ಬದುಕಿನ ಬೆಲೆಬಾಳುವ ವಿಷಯಗಳನ್ನ, ಕುಟುಂಬದ ಬಂಧ, ಧಾರ್ಮಿಕ ಸೌಹಾರ್ದತೆ ಮತ್ತು ತುಳುನಾಡಿನ ಸಂಸ್ಕೃತಿ-ಸಂಪ್ರದಾಯದ ಮೌಲ್ಯಗಳಿವೆ.

ಹಿರಿಯ ಕಲಾವಿದರ ಅನುಭವ ಮತ್ತು ಯುವ ಪ್ರತಿಭೆಗಳ ಹುರುಪು ಒಂದಾದಾಗ ಹುಟ್ಟಿದ್ದೇ ಕಜ್ಜ. ಅರವಿಂದ್ ಬೋಳಾರ್, ಉಮೇಶ್ ಮಿಜಾರ್, ಸಂತೋಷ್ ಶೆಟ್ಟಿ, ಪೂರ್ಣಿಮಾ ರಾವ್ ಅವರಂತಹ ಹಿರಿಯ ಕಲಾವಿದರ ಜೊತೆ ಸಿದ್ಧಾರ್ಥ್ ಶೆಟ್ಟಿ, ಸಹನಾ ಸುಧಾಕರ್, ವೆನ್ಸಿಟಾ ಡಯಾಸ್, ಗೌತಮ್ ಬಂಗೇರ ಅವರಂತಹ ಯುವ ತಾರೆಯರು ತೆರೆಗೆ ಬಣ್ಣ ತುಂಬಿದ್ದಾರೆ.

ನಗು, ಭಾವನೆ, ಸಂಸ್ಕೃತಿ ಎಲ್ಲವೂ ಒಂದಾದ ಕಜ್ಜ ತುಳುನಾಡಿನ ಹೆಮ್ಮೆಯ ಕಥೆಯಾಗಿದೆ. ಕುಟುಂಬ ಸಮೇತ ಬನ್ನಿ, ನಮ್ಮ ನೆಲದ ಕಥೆಯನ್ನು ನಮ್ಮ ಭಾಷೆಯಲ್ಲಿ ಸವಿಯಿರಿ. ಶೀಘ್ರದಲ್ಲೇ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ನೋಡಬಹುದು.