ಸ್ಯಾಂಡಲ್ವುಡ್ ಹೀರೋ ಪ್ರವೀಣ್ ತೇಜ್ ನಟಿಸಿರುವ ‘ಜಿಗರ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪೂಜಾ ವಸಂತಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸೂರಿ ಕುಂದರ್ ನಿರ್ದೇಶನ ಈ ಸಿನಿಮಾಗಿದೆ.
ಇತ್ತೀಚೆಗೆ ‘ಜಿಗರ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಪಿ.ಆರ್.ಓ. ಸುಧೀಂದ್ರ ವೆಂಕಟೇಶ್ ಅವರು ಟ್ರೇಲರ್ ಅನಾವರಣ ಮಾಡಿ ಸಿನಿಮಾತಂಡಕ್ಕೆ ಶುಭ ಹಾರೈಸಿದರು. ಪಿ.ಆರ್.ಓ. ಸುಧೀಂದ್ರ ವೆಂಕಟೇಶ್ ಅವರು ಟ್ರೇಲರ್ ಅನಾವರಣ ಮಾಡಿ ಸಿನಿಮಾತಂಡಕ್ಕೆ ಶುಭ ಹಾರೈಸಿದರು. ಜುಲೈ 5ರಂದು ‘ಜಿಗರ್’ ಸಿನಿಮಾ ತೆರೆಕಾಣಲಿದೆ. ಈಗ ಟ್ರೇಲರ್ ಮೂಲಕ ಕೌತುಕ ಮೂಡಿಸಲಾಗಿದೆ.
ಈ ಸಿನಿಮಾದಲ್ಲಿ ಪ್ರವೀಣ್ ತೇಜ್ ಅವರು ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ‘ಲವ್ಸ್ಟೋರಿ ಸಿನಿಮಾಗಳಿಗೆ ಸೀಮಿತ ಆಗಿದ್ದ ನನ್ನನ್ನು ನಿರ್ದೇಶಕ ಸೂರಿ ಕುಂದರ್ ಅವರು ಈ ಸಿನಿಮಾದ ಮೂಲಕ ಆ್ಯಕ್ಷನ್ ಹೀರೋ ಮಾಡಿದ್ದಾರೆ’ ಎಂದಿದ್ದಾರೆ ಪ್ರವೀಣ್ ತೇಜ್.

