ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ನಡೆದಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಈ ಆರೋಪ ಬೆನ್ನಲ್ಲೇ ಜಗ್ಗೇಶ್ ಟ್ವೀಟ್ ಒಂದನ್ನು ಮಾಡಿದ್ದಾರೆ.

ಈ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾರನ್ನೂ ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ಕರ್ಮ ಜೀವನದ ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪ ಕರ್ಮ ಅವನ ಸುಡುತ್ತದೆ. ಕಲಿಯುಗದಲ್ಲಿ ದೇವರು ಕಲ್ಲಲ್ಲ, ಕರ್ಮಕ್ಕೆ ತತ್​ಕ್ಷಣ ಫಲಿತಾಂಶ ಉಂಟು. ರಾಮನಾಗು ರಾವಣನಾದರೆ ಅಂತ್ಯ ಎಂದು ಬರೆದಿದ್ದಾರೆ.

ಆದರೆ ಜಗ್ಗೇಶ್ ಅವರು ತಮ್ಮ ಟ್ವೀಟ್​ನಲ್ಲಿ ಎಲ್ಲಿಯೂ ಕೂಡ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿಲ್ಲ. ಜೊತೆಗೆ ದರ್ಶನ್ ಅವರ ಹೆಸರನ್ನೂ ಪ್ರಸ್ತಾಪಿಸಿಲ್ಲ. ನಿನ್ನೆಯ ಬೆಳವಣಿಗಳ ಬೆನ್ನಲ್ಲೇ ಜಗ್ಗೇಶ್ ಈ ರೀತಿ ಟ್ವೀಟ್ ಮಾಡಿರೋದು ಚರ್ಚೆ ಆಗುತ್ತಿದೆ.