ವೈರಲ್: ಸೌತ್ ಇಂಡಿಯಾದ ಸ್ಟಾರ್ ಹಿರೋಯಿನ್ ಸಾಯಿ ಪಲ್ಲವಿ ಅವರು ಯಾವಾಗಲೂ ವಿವಾದಗಳಿಂದ ದೂರ ಇರೋರು. ಹಾಗಿದ್ರೂ ಸಾಯಿ ಪಲ್ಲವಿ ಬಗ್ಗೆ ಕಿಡಿಗೇಡಿಗಳು ಗಾಸಿಪ್ ಹಬ್ಬಿಸುತ್ತಾರೆ. ಈ ಅಂಥದ್ದೇ ರೂಮರ್ ಒಂದು ಸಾಯಿ ಪಲ್ಲವಿ ಬಗ್ಗೆ ಕೇಳಿ ಬಂದಿದೆ.
ಬಾಲಿವುಡ್ಗೆ ಕಾಲಿಡುತ್ತಿದ್ದಂತೆ ಸಾಯಿ ಪಲ್ಲವಿ ಬಗ್ಗೆ ಕೆಲವರು ಬೇಕಂತಲೇ ಗಾಸಿಪ್ ಹರಡಿದ್ದಾರೆ. ಅದರಲ್ಲೂ ಇಬ್ಬರು ಮಕ್ಕಳ ತಂದೆಯೊಂದಿಗೆ ಸಾಯಿ ಪಲ್ಲವಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಗಾಳಿಸುದ್ದಿ ಹರಡಿ ಇಮೇಜ್ ಡ್ಯಾಮೇಜ್ ಮಾಡಿದ್ದಾರೆ. ಈ ಇಬ್ಬರು ಮಕ್ಕಳ ತಂದೆ ಸೌತ್ ಇಂಡಿಯಾದ ಸ್ಟಾರ್ ನಟ ಎಂದು ಕೂಡ ಹೇಳಲಾಗುತ್ತಿದೆ. ಈ ಹಿಂದೆ ಸಾಯಿ ಪಲ್ಲವಿ ಮದುವೆ ಆಗಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿತ್ತು.

