Bengaluru 22°C
Ad

ಇಂಡಿಯನ್ 2 ಟ್ರೈಲರ್ ರಿಲೀಸ್​ : ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಬಂದ ಸೇನಾಪತಿ

ಕಮಲ್ ಹಾಸನ್ ಅಭಿನಯದ ಶಂಕರ್ ನಿರ್ದೇಶನದ ಇಂಡಿಯನ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. 1996ರಲ್ಲಿ ತೆರೆ ಕಂಡು ಸೂಪರ್ ಹಿಟ್ ಆದ ಇಂಡಿಯನ್ ಸಿನಿಮಾದ ಮುಂದುವರೆದ ಭಾಗ ಇದಾಗಿದೆ. ಶಂಕರ್ ನಿರ್ದೇಶನದ ಇಂಡಿಯನ್ 2 ಚಿತ್ರದಲ್ಲಿ ಕಮಲ್ ಹಾಸನ್ ಮತ್ತು ಕಾಜಲ್ ಅಗರ್ವಾಲ್ ಮುಖ್ಯ ಭೂಮಿಕೆ ಕಾಣಿಸಿಕೊಳ್ಳಲ್ಲಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ನಲ್ಲಿ ಮೂಡಿಬಂದಿರುವ ಈ ಸಿನಿಮಾ ಸಿನಿಮಾಗೆ ಅನಿರುದ್ಧ್ ಸಂಗೀತ ಸಂಯೋಜಿಸಿದ್ದಾರೆ. ಕಮಲ್ ಹಾಸನ್, ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಹುಲ್ ಪ್ರೀತ್ ಸಿಂಗ್ ನಟಿಸಿರುವ ‘ಇಂಡಿಯನ್ 2’ ಮುಂದಿನ ತಿಂಗಳು ಜುಲೈ 12 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ತೆರೆ ಮೇಲೆ ಇಂಡಿಯನ್ 2 ಸಿನಿಮಾ ನೋಡಲು ಕಮಲ್ ಹಾಸನ್​ ಫ್ಯಾನ್ಸ್ ಕಾಯ್ತಿದ್ದಾರೆ. ಚಿತ್ರದ ಟ್ರೈಲರ್ ಅನ್ನು ಇದೇ ತಿಂಗಳ 25 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿತ್ತು. ಈ ಘೋಷಣೆ ಕಮಲ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ನಿನ್ನೆ(ಜೂನ್​) ಸಂಜೆ 7 ಗಂಟೆಗೆ ಇಂಡಿಯನ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

Ad
Ad
Nk Channel Final 21 09 2023
Ad