ಕಾಲಿವುಡ್‌ನ ಇಂಡಿಯನ್-2 ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತಿದೆ. ಬಹು ನಿರೀಕ್ಷಿತ ಈ ಚಿತ್ರದಲ್ಲಿ ಕಮಲ್ ಕಮಾಲ್ ಮತ್ತೊಮ್ಮೆ ನೋಡಬಹದು. 28 ವರ್ಷ ಹಿಂದೆ ಬಂದ ಇಂಡಿಯನ್ ಚಿತ್ರದಲ್ಲೂ ಕಮಲ್ ಹಾಸನ್ ಮೋಡಿ ಮಾಡಿದ್ದರು. ಸ್ವತಂತ್ರ ಹೋರಾಟಗಾರನಾಗಿಯೇ ಕಂಗೊಳಿಸಿದ್ದರು.
ಈ ಮೂಲಕ ಆಗಲೇ ದೇಶ ಭಕ್ತಿಯ ಕಿಚ್ಚು ಹಚ್ಚಿದ್ದರು. ಇದೀಗ ಮತ್ತೊಮ್ಮೆ ಇಂಡಿಯನ್-2 ಚಿತ್ರದಲ್ಲೂ ಅದನ್ನೇ ಮಾಡೋಕೆ ಬರ್ತಿದ್ದಾರೆ. ತಮಿಳುನಾಡು ಸೇರಿದಂತೆ ಎಲ್ಲೆಡೆ ಬರ್ತಿರೋ ಈ ಚಿತ್ರ, ಕರ್ನಾಟಕದಲ್ಲಿ 200 ಪ್ಲಸ್ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಈ ಮೂಲಕ ಕನ್ನಡ ನಾಡಿನಲ್ಲಿ ದೊಡ್ಡಮಟ್ಟದಲ್ಲಿಯೇ ಈ ಸಿನಿಮಾ ರಿಲೀಸ್ ಆಗುತ್ತಿದೆ.
ಇಂಡಿಯನ್ -2 ಸಿನಿಮಾ ಬಹುವೆಚ್ಚದಲ್ಲಿಯೇ ಇದು ರೆಡಿ ಆಗಿದೆ. ಸುಮಾರು 250 ಕೋಟಿ ಬಜೆಟ್‌ನಲ್ಲಿಯೇ ಈ ಚಿತ್ರವನ್ನ ಡೈರೆಕ್ಟರ್ ಶಂಕರ್ ತೆಗೆದಿದ್ದಾರೆ. ಕಮಲ್ ಹಾಸನ್ ಸೇರಿದಂತೆ ನಟ ಸಿದ್ಧಾರ್ಥ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರ ಈ ಸಿನಿಮಾದಲ್ಲಿ ರಾಕುಲ್ ಪ್ರೀತ್ ಸಿಂಗ್ ಕೂಡ ಇದ್ದಾರೆ.
ಬಹು ತಾರೆಯರ ಈ ಚಿತ್ರದಲ್ಲಿ ಕಮಲ್ ಹಾಸನ್ ತಮ್ಮದೇ ಕಮಾಲ್ ಮಾಡಿದ್ದಾರೆ.

