ನವದೆಹಲಿ: ಅನಿಮಲ್ ಚಿತ್ರದಲ್ಲಿ ತೃಪ್ತಿ ದಿಮ್ರಿ ಮತ್ತು ರಣಬೀರ್ ಕಪೂರ್ ಅವರು ಸಖತ್ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀನ್ಗಳಿಗೆ ಬಾಂಗ್ಲಾದೇಶದ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ.
ಬಾಂಗ್ಲಾದೇಶದ ಸೆನ್ಸಾರ್ ಮಂಡಳಿ ಸದಸ್ಯರು ‘ಅನಿಮಲ್’ ಸಿನಿಮಾದ 27 ನಿಮಿಷವನ್ನು ಕತ್ತರಿಸಿದ್ದಾರೆ. ಈಗ ಅದರ ಒಟ್ಟು ಅವಧಿ 2 ಗಂಟೆ 56 ನಿಮಿಷ ಆಗಿದೆ. ಅಲ್ಲಿನ ಪ್ರೇಕ್ಷಕರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಭಾರತದಲ್ಲಿ ಡಿಸೆಂಬರ್ 1ರಂದು ಬಿಡುಗಡೆ ಆದ ಈ ಸಿನಿಮಾ ರಣಬೀರ್ ಕಪೂರ್ ಪಾಲಿಗೆ ದೊಡ್ಡ ಗೆಲುವು ತಂದುಕೊಟ್ಟಿದೆ.
ಭಾರತದ ಗಲ್ಲಾಪೆಟ್ಟಿಗೆಯಲ್ಲಿ ‘ಅನಿಮಲ್’ ಸಿನಿಮಾ 532 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರವನ್ನು ವಿಮರ್ಶಕರು ಕಟುವಾಗಿ ಟೀಕಿಸಿದ್ದಾರೆ. ಆದರೆ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ.