ಬಾಲಿವುಡ್ಗೆ ಹಾರಿದ ನಟಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಅನಿಮಲ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ನಿರ್ದೇಶಕರೇ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಡಿಸೆಂಬರ್ 1 ರಂದು ‘ಅನಿಮಲ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಬಗ್ಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಮಾತಾಡಿದ ನಿರ್ದೇಶಕ ಸಂದೀಪ್ ವಂಗಾ, ಅನಿಮಲ್ ಸಿನಿಮಾ ರಿಲೀಸ್ ದಿನಾಂಕ ಮುಂದೂಡಿದ್ದಕ್ಕೆ ಕಾರಣ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ. ಆಗಸ್ಟ್ 11ರಂದು ‘ಅನಿಮಲ್’ ಬಿಡುಗಡೆ ಆಗಲಿದೆ ಎಂದು ಘೋಷಿಸಿದ್ದಾರೆ. ಪ್ರೇಕ್ಷಕರಿಗೆ ಗುಣಮಟ್ಟದ ಸಿನಿಮಾವನ್ನು ನೀಡಬೇಕು ಎಂಬ ಕಾರಣಕ್ಕೆ ಸಂದೀಪ್ ರೆಡ್ಡಿ ವಂಗಾ ಅವರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಅನಿಮಲ್ ಸಿನಿಮಾ ಮೂಲಕ ಬಾಲಿವುಡ್ನಲ್ಲಿ ರಶ್ಮಿಕಾ ಮಿಂಚುವ ಪ್ಲಾನ್ ಮಾಡಿದ್ದಾರೆ. ಅನಿಮಲ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿದೆ. ಹಿಂದಿ, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಸಿನಿಮಾ ತೆರೆಕಾಣಲಿದೆ.
ಚಿತ್ರದಲ್ಲಿ ಒಟ್ಟು 7 ಹಾಡುಗಳು ಇವೆ. ಪ್ರತಿ ಭಾಷೆಯ ಹಾಡುಗಳು ಪ್ರತ್ಯೇಕವಾಗಿ ಸಿದ್ಧವಾಗುತ್ತಿವೆ. ಎಲ್ಲವನ್ನೂ ಸೇರಿದರೆ 35 ಹಾಡುಗಳು ಆಗಲಿವೆ. ಅನಿಮಲ್ ಸಿನಿಮಾದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿ ಮುಂತಾದವರು ಸಿನಿಮಾದಲ್ಲಿ ನಟಿಸಲಿದ್ದಾರೆ. ಅನಿಮಲ್ ಸಿನಿಮಾ ಆ್ಯಕ್ಷನ್ ಪ್ರಧಾನ ಚಿತ್ರವಾಗಿದೆ. ‘ರಣಬೀರ್ ಕಪೂರ್ ಅವರ ವಿಶ್ವರೂಪ ನೋಡಲು ಡಿಸೆಂಬರ್ 1 ರಂದು ಚಿತ್ರಮಂದಿರಕ್ಕೆ ಬನ್ನಿ ಎಂದು ಸಂದೀಪ್ ರೆಡ್ಡಿ ವಂಗ ಅವರು ಹೇಳಿದ್ದಾರೆ.