ತಮ್ಮ ಖಾಸಗಿ ಬದುಕನ್ನು ಲೈಮ್ ಲೈಟ್‌ನಿಂದ ಬಹಳ ದೂರವೇ ಇಟ್ಟಿರುವಂತಹ ನಟಿ ಇಲಿಯಾನಾ ಡಿ ಕ್ರೂಜ್ ಈಗ ತಮ್ಮ ಪತಿ ಹಾಗೂ ಮುದ್ದು ಮಗನ ಸುಂದರ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಪತಿ ಮೈಕ್ ಡೊಲನ್ ಜೊತೆ ಮದುವೆಯ ಫೋಟೋವನ್ನಾಗಲಿ ಇಲಿಯಾನಾ ಇಲ್ಲಿಯವರೆಗೂ ಎಲ್ಲೂ ಶೇರ್ ಮಾಡಿಕೊಂಡಿಲ್ಲ. ಅದಕ್ಕೂ ಮೊದಲು ಅವರು ತಾನು ಒಬ್ಬರೊಂದಿಗೆ ಪ್ರೇಮ ಸಂಬಂಧದಲ್ಲಿದ್ದೇನೆ ಎಂಬ ವಿಚಾರವನ್ನು ಕೂಡ ಯಾರಿಗೂ ಹೇಳಿರಲಿಲ್ಲ.

ಇದರಿಂದಲೇ ಕಳೆದ ವರ್ಷ ಅವರು ಏಪ್ರಿಲ್‌ನಲ್ಲಿ ಒಮ್ಮಿಂದೊಮ್ಮೆಲೇ ತಾನು ಗರ್ಭಿಣಿ ಎಂಬ ವಿಚಾರವನ್ನು ಘೋಷಿಸಿಕೊಂಡಾಗ ಅಭಿಮಾನಿಗಳು ಸೇರಿದಂತೆ ಎಲ್ಲರೂ ಶಾಕ್‌ ಆಗಿದ್ದರು.

ಇದಾದ ನಂತರ ಕಳೆದ ವರ್ಷ ಆಗಸ್ಟ್‌ನಲ್ಲಿ ನಟಿ ಮಗನನ್ನು ಬರ ಮಾಡಿಕೊಂಡಿದ್ದು, ಮಗನಿಗೆ ಕೋವಾ ಫೀನಿಕ್ಸ್ ಡೋಲನ್ ಎಂದು ಹೆಸರಿಟ್ಟಿದ್ದಾರೆ.

ಅಪ್ಪ ಮೈಕ್ ಡೊಲನ್ ಜೊತೆ ಕೋವಾ ಫೀನಿಕ್ಸ್ ಹಾಗೂ ನಟಿ ಇಲಿಯಾನಾ ಇರುವ ಫೋಟೋ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೋಟೋದಲ್ಲಿ ಮಗು ಕೋವಾ ಅಪ್ಪ ಅಮ್ಮನೊಂದಿಗೆ ಇರುವುದನ್ನು ಕಾಣಬಹುದಾಗಿದೆ. ಸಮಯ ಎಷ್ಟು ವೇಗವಾಗಿ ಸಾಗುತ್ತಿದೆ. ಸಮಯ ಎಲ್ಲಿಗೆ ಹೋಗುತ್ತಿದೆ, ಅದರಂತೆ ನನ್ನ ಮಗನಿಗೆ ಒಂದು ತುಂಬಿದೆ ಎಂದು ಅವರು ಬರೆದುಕೊಂಡಿದ್ದಾರೆ.