News Karnataka Kannada
Monday, April 29 2024
ಮನರಂಜನೆ

‘ಎಲ್ಲವನ್ನೂ ಹೇಳಿದೆ, ಎಲ್ಲವನ್ನೂ ಮಾಡಿದೆ’: ಗೂಢಾರ್ಥದಲ್ಲಿ ಟ್ವೀಟ್ ಮಾಡಿದ ಬಚ್ಚನ್

'I said everything, I did everything': Bachchan tweeted
Photo Credit : Twitter

ಮುಂಬೈ : ಇಲ್ಲಿ ತನಕ ಬಚ್ಚನ್ ಕುಟುಂಬದಲ್ಲಿ ಯಾವುದೇ ಟೀಕೆಗೂ ಒಳಗೊಂಡಿರಲಿಲ್ಲ ಆದ್ರೆ ಇತ್ತೀಚಿಗೆ ಐಶ್ವರ್ಯ ರೈ ಅಮಿತಾಭ್ ಬಚ್ಚನ್ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಚರ್ಚೆಗೆ ಕಾರಣವಾಗುತ್ತಿದ್ದು, ಐಶ್ವರ್ಯಾ  ಹಾಗೂ ಅಭಿಷೇಕ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ಜೋರಾಗಿದೆ.

ಈ ಬೆನ್ನಲ್ಲೇ ಅಮಿತಾಭ್ ಅವರು ಒಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸಾಕಷ್ಟು ಅಚ್ಚರಿ ಮೂಡಿಸಿದೆ. ಇದು ಐಶ್ವರ್ಯಾ ರೈ ಕುರಿತು ಮಾಡಿದ ಟ್ವೀಟ್ ಇರಬಹುದೇ ಎನ್ನುವ ಅನುಮಾನ ಮೂಡಿದೆ.

ಅಮಿತಾಭ್ ಕುಟುಂಬದ ಕೆಲವರನ್ನು ಸಾರ್ವಜನಿಕವಾಗಿಯೇ ಐಶ್ವರ್ಯಾ ನಿರ್ಲಕ್ಷಿಸುತ್ತಿದ್ದಾರೆ. ಇದು ಅನುಮಾನ ಹುಟ್ಟಲು ಮೂಲ ಕಾರಣ. ಈ ಮಧ್ಯೆ ಅಮಿತಾಭ್ ಅವರು ಗೂಢಾರ್ಥದಲ್ಲಿ ಟ್ವೀಟ್ ಒಂದನ್ನು ಮಾಡಿದ್ದಾರೆ.

ಅಮಿತಾಭ್ ಬಚ್ಚನ್  ‘ಎಲ್ಲವನ್ನೂ ಹೇಳಿದೆ, ಎಲ್ಲವನ್ನೂ ಮಾಡಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ, ‘ಸೋ ಡು ದಿ ಡನ್ ಆ್ಯಂಡ್ ಡನ್​ ದಿ ಡೂ’ ಎಂದು ಗೂಡಾರ್ಥ ಇರುವ ರೀತಿಯಲ್ಲಿ ಅವರು ಬರೆದುಕೊಂಡಿದ್ದಾರೆ.

ಇದು ಮಗ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅವರು ಪರೋಕ್ಷವಾಗಿ ಮಾತನಾಡಿದರೇ ಎನ್ನುವ ಪ್ರಶ್ನೆಯೂ ಮೂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು