ಕಲರ್ಸ್ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಗಿಚ್ಚಿಗಿಲಿಗಿಲಿ ಸೀಸನ್ 3ರ ವಿನ್ನರ್ ರಿವೀಲ್ ಆಗಿದೆ. ಗಿಚ್ಚಿಗಿಲಿಗಿಲಿ ಸೀಸನ್ 3ರ ವಿನ್ನರ್ ಆಗಿ ಹುಲಿ ಕಾರ್ತಿಕ್ ಹೊರಹೊಮ್ಮಿದ್ದಾರೆ. ಬರೋಬ್ಬರಿ 8 ತಿಂಗಳ ಕಾಲ ಸುದೀರ್ಘವಾಗಿ ಮೂಡಿಬಂದಿದ್ದ ಗಿಚ್ಚಿ ಗಿಲಿಗಿಲಿ ಸೀಸನ್ 3 ಮುಕ್ತಾಯಗೊಂಡಿದೆ. ರನ್ನರ್ ಅಪ್ ಯಾರು? ವಿಜೇತರು ಪಡೆದುಕೊಂಡ ಬಹುಮಾನ ಏನು? ತಿಳಿಯಲು ಮುಂದೆ ಓದಿ.
ಗಿಚ್ಚಿಗಿಲಿಗಿಲಿ ಸೀಸನ್ 3ರ ವಿನ್ನರ್ ಆಗಿ ಹುಲಿ ಕಾರ್ತಿಕ್ ಹೊರಹೊಮ್ಮಿದ್ದಾರೆ. ಜತೆಗೆ 10 ಲಕ್ಷ ರೂಗಳ ಚಿನ್ನದ ಬೆಲ್ಟ್ ಗೆದ್ದಿದ್ದಾರೆ. ತುಕಾಲಿ ಮಾನಸ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಜತಗೆ 3 ಲಕ್ಷ ರೂ ಬಹುಮಾನ ಗೆದ್ದಿದ್ದಾರೆ.
ಕಾರ್ತಿಕ್ ಮೂಲತಃ ಶಿವಮೊಗ್ಗದವರು. ತೀರ್ಥಹಳ್ಳಿಯ ಚಿಕ್ಕಳ್ಳಿ ಎಂಬ ಊರಿನವರು. ಇವರಿಗೆ ತಾಯಿಯೇ ಪ್ರಪಂಚ. ಬಡತನದಲ್ಲಿ ಬೆಳೆದ ಕಾರ್ತಿಕ್ ಗಾರೆ ಕೆಲಸ , ಪಂಚರ್ ಶಾಪ್, ವೆಲ್ಡಿಂಗ್ ಶಾಪ್, ಐಸ್‌ಕ್ರೀಮ್ ಪಾರ್ಲರ್ ನಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡಿದ್ದರು. ಟಗರು ಪಲ್ಯ’, ‘ತ್ರಿವಿಕ್ರಮ’ ಮುಂತಾದ ಹಲವು ಸಿನಿಮಾಗಳಲ್ಲಿ ಹುಲಿ ಕಾರ್ತಿಕ್ ನಟಿಸಿದ್ದಾರೆ.

