ಹಾಲಿವುಡ್ ನ ಖ್ಯಾತ ನಟಿ ಎರಿಕಾ ಆಶ್ ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದಾಗಿ 46 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ನಟಿ ಎರಿಕಾ ಅವರು ದೀರ್ಘಕಾಲದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು ಆದರೆ ಅಂತಿಮವಾಗಿ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋತಿದ್ದಾರೆ.

ಎರಿಕಾ OTT ಪ್ಲಾಟ್‌ ಫಾರ್ಮ್ ನೆಟ್‌ ಫ್ಲಿಕ್ಸ್‌ ನಲ್ಲಿಯೂ ಜನಪ್ರಿಯರಾಗಿದ್ದರು. ಪ್ರಸಿದ್ಧ ಸರಣಿ ‘ಹ್ಯಾವ್ ಎ ಘೋಸ್ಟ್’ ನಲ್ಲಿ ಅವರ ಅಭಿನಯವು ಅನೇಕ ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ಆಕೆಗೆ ಅಪಾರ ಅಭಿಮಾನಿ ಬಳಗವೂ ಇತ್ತು. ಎರಿಕಾ ಆಶ್ ಸಾವಿನ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಅನೇಕ ಹಾಲಿವುಡ್ ಗಣ್ಯರು ನಟಿಯ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಭಯಾನಕ ಚಲನಚಿತ್ರ ಫ್ರ್ಯಾಂಚೈಸ್‌ ನಲ್ಲಿ ನಟಿ ಎರಿಕಾ ಆಶ್ ಅಭಿನಯವು ಪ್ರೇಕ್ಷಕರ ಹೃದಯವನ್ನು ಗೆದ್ದಿತ್ತು. ನಟಿ ಫಾಕ್ಸ್ ಸ್ಕೆಚ್ ಕಾಮಿಡಿ ಶೋ ಮ್ಯಾಡ್ ಟಿವಿ ಮತ್ತು ಹಾಲಿವುಡ್‌ನ ಬಿಇಟಿ ರಿಯಾಲಿಟಿ ಸ್ಪೂಫ್ ರಿಯಲ್ ಹಸ್ಬೆಂಡ್ಸ್‌ ಶೋಗಳಲ್ಲಿ ನಟಿ ಎರಿಕಾ ಆಶ್ ಎಲ್ಲರ ಗಮನಸೆಳೆದಿದ್ರು.