ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣ ಆಧರಿಸಿಕೊಂಡು ನಿರ್ಮಿಸಲಾಗಿದೆ ಎನ್ನಲಾದ ‘ಬಾಸ್’ ಸಿನಿಮಾ ಬಿಡುಗಡೆಗೆ ನೀಡಲಾಗಿದ್ದ ಮಧ್ಯಾಂತರ ತಡೆಯಾಜ್ಞೆ ತೆರವುಗೊಳಿಸಿದ್ದ ವಿಚಾರಣ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಈ ಆದೇಶದಿಂದಾಗಿ ‘ಬಾಸ್’ ಚಿತ್ರದ ಪ್ರದರ್ಶನಕ್ಕಿದ್ದ ಅಡ್ಡಿ ತೆರವಾಗಿದೆ. ಇದರಿಂದ ಜೈಲು ವಾಸ ಅನುಭವಿಸುತ್ತಿರುವ ದರ್ಶನ್, ಅರ್ಜಿ ಸಲ್ಲಿಸಿದ್ದ ಪತ್ನಿ ವಿಜಯಲಕ್ಷ್ಮೀಗೆ ಹಿನ್ನಡೆಯಾಗಿದೆ.
ಚಿತ್ರ ಬಿಡುಗಡೆಗೆ ಅವಕಾಶ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪ್ರದೀಪ್ ಸಿಂಗ್ ಯೆರೂರ್‌ಅವರಿದ್ದ ಏಕಸದಸ್ಯ ನ್ಯಾಯಪೀಠ, ಮೇಲ್ಮನವಿದಾರರು, ಅವರ ಕುಟುಂಬ ಅಥವಾ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಯಾವುದೇ ನೈಜ ಘಟನೆಗಳು ಚಿತ್ರದಲ್ಲಿಲ್ಲ ಎಂದಿದ್ದೀರಿ. ಅದಕ್ಕೆ ಬದ್ಧರಾಗಿರಿ ಎಂದು ನಿರ್ಮಾಣ ಸಂಸ್ಥೆಗೆ ಕೋರ್ಟ್ ಎಚ್ಚರಿಸಿತು.

