ಗರ್ಬಾ ಕಿಂಗ್​ ಎಂದೇ ಪ್ರಸಿದ್ಧರಾಗಿರುವ ನಟ ಅಶೋಕ್​ ಮಾಲಿ ನೃತ್ಯ ಮಾಡುವ ವೇಳೆ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.

ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಹೃದಯಾಘಾತಕ್ಕೆ ಅಶೋಕ್​ ಮಾಲಿ ಸಾವನ್ನಪ್ಪಿದ್ದಾರೆ. ಅಶೋಕ್​ ಮಾಲಿ ಹೃದಯಾಘಾತದಿಂದ ಕುಸಿದು ಬೀಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದಸರಾ ಸಮಯದಲ್ಲಿ ಧುಲೆ ಜಿಲ್ಲೆಯ ಶಿಂಧಖೇಡಾ ತಾಲೂಕಿನ ಹೋಲ್​ ಗ್ರಾಮದಲ್ಲಿ ನವರಾತ್ರಿ ಉತ್ಸವ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಶೋಕ್​ ಮಾಲಿ ಭಾಗವಹಿಸಿದ್ದು, ಪ್ರದರ್ಶನ ನೀಡಲು ಆಗಮಿಸಿದ್ದರು. ಅಶೋಕ್​ ಅವರ ಗರ್ಬಾ ನೃತ್ಯ ಕಾಣಲು ಅನೇಕ ಜನರು ನೆರೆದಿದ್ದರು.