ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಮೊದಲ ಬಾರಿಗೆ ಮದುವೆ ಲೈಫ್ ಬಗ್ಗೆ ಮಾತನಾಡಿದ್ದಾರೆ. ಪ್ರೀತಿ ಮಾಡಲು ಕೋರ್ಟ್ ಅನುಮತಿ ಬೇಕಿಲ್ಲ ಎಂದು ರಿಯಾ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಈ ವಿಚಾರದ ಬಗ್ಗೆ ನಟಿ ಮಾತನಾಡಿದ್ದಾರೆ.
Zerodha ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಜೊತೆ ರಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡಿಲ್ಲ. ಇದರ ನಡುವೆ ರಿಯಾ ಲವ್, ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಇಷ್ಟು ವಯಸ್ಸಿಗೆ ಮದುವೆ ಆಗಬೇಕು ಅಂತ ಹೇಳಲು ಆಗಲ್ಲ. ಮದುವೆಗೆ ಒಬ್ಬೊಬ್ಬರಿಗೆ ಒಂದೊಂದು ವಯಸ್ಸು ಸೂಕ್ತ ಎನಿಸಿಸುತ್ತದೆ. ಮದುವೆ ವಿಷಯದಲ್ಲಿ ಹೆಣ್ಣು ಏನು ಎದುರಿಸುತ್ತಾಳೋ ಅದನ್ನು ಪುರುಷ ಎದುರಿಸಲಾರ. ಮದುವೆ ಎಂದಾಗ ಒಂದಷ್ಟು ಒತ್ತಡ ಇರುತ್ತದೆ ಎಂದಿದ್ದಾರೆ.
32ನೇ ವಯಸ್ಸಿನಲ್ಲಿರುವ ನಾನು 40ನೇ ವಯಸ್ಸಿಗೆ ಮದುವೆ ಆಗೋದಕ್ಕೆ ಬಯಸುವೆ. ನಾನು ಇನ್ನೂ ಮದುವೆ ಆಗೋಕೆ ರೆಡಿ ಇಲ್ಲ. ನನಗೆ ವೃತ್ತಿ ಜೀವನದ ಕಡೆಗೆ ಗಮನ ಕೊಡಬೇಕಿದೆ. ಮದುವೆ ವಿಚಾರದಲ್ಲಿ ಕಾನೂನು ಮಧ್ಯೆ ಬರೋದು ನನಗೆ ಇಷ್ಟ ಇಲ್ಲ. ನಾನು ಪಾಸ್‌ಪೋರ್ಟ್ ಪಡೆದುಕೊಳ್ಳಲು ಕೋರ್ಟ್‌ಗೆ ಹೋಗುತ್ತೇನೆ. ಆದರೆ ಒಬ್ಬರನ್ನು ಪ್ರೀತಿ ಮಾಡಲು ಅನುಮತಿ ಕೊಡಿ ಅಂತ ಕೋರ್ಟ್ ಬಳಿ ಕೇಳೋದಿಲ್ಲ ಎಂದು ರಿಯಾ ಚಕ್ರವರ್ತಿ ಹೇಳಿದ್ದಾರೆ.

