Bengaluru 27°C
Ad

ಭಿನ್ನ ಫೋಟೊಶೂಟ್ ಮೂಲಕ ಸಿಹಿ ಸುದ್ದಿ ಹಂಚಿಕೊಂಡ ಹರ್ಷಿಕಾ ಪೂಣಚ್ಚ–ಭುವನ್

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಮತ್ತು ಭವನ್‌ ದಂಪತಿ ಪೋಷಕರಾಗುತ್ತಿರುವ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹರ್ಷಿಕಾ ಈ ಸಂಭ್ರಮವನ್ನು ವಿಭಿನ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ.

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಮತ್ತು ಭವನ್‌ ದಂಪತಿ ಪೋಷಕರಾಗುತ್ತಿರುವ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹರ್ಷಿಕಾ ಈ ಸಂಭ್ರಮವನ್ನು ವಿಭಿನ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ.

Ad
300x250 2

2023, ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮದುವೆಯಾಗಿ ವರ್ಷದೊಳಗೆ ಗುಡ್‌ನ್ಯೂಸ್‌ ನೀಡಿದ್ದಾರೆ.

ತಾವು ಪೋಷಕರಾಗುತ್ತಿರೋ ವಿಚಾರ ಭುವನ್ ಮತ್ತು ಹರ್ಷಿಕಾ ತಮ್ಮ ಸಾಮಾಜಿಕಾ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಹರ್ಷಿಕಾ ಐದು ತಿಂಗಳ ಗರ್ಭಿಣಿ ಆಗಿದ್ದು, ಕುಟುಂಬದೊಟ್ಟಿಗೆ ಸೇರಿ ಭಿನ್ನ ರೀತಿಯ ಫೋಟೊಶೂಟ್ ಮಾಡಿಸಿ ಖುಷಿಪಟ್ಟಿದ್ದಾರೆ. ಪ್ರೆಗ್ನೆನ್ಸಿ ಶೂಟ್ ಎಂಬುದು ಇತ್ತೀಚೆಗೆ ಬಹಳ ಟ್ರೆಂಡ್​ನಲ್ಲಿದೆ. ಆದರೆ ನಟಿಯರು ಪ್ರೆಗ್ನೆನ್ಸಿ ಶೂಟ್​ನಲ್ಲೂ ಗ್ಲಾಮರ್ ಆಂಗಲ್​ ತೋರಿಸುವುದು ಸಾಮಾನ್ಯವಾಗಿದೆ. ಆದರೆ ಹರ್ಷಿಕಾ ಪೂಣಚ್ಚ ಕುಟುಂಬದೊಟ್ಟಿಗೆ ಸಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಭಿನ್ನವಾಗಿ ಫೋಟೊಶೂಟ್ ಮಾಡಿಸಿದ್ದಾರೆ.

Ad
Ad
Nk Channel Final 21 09 2023
Ad