ಬ್ಲಾಕ್ ಬಸ್ಟರ್ ಸಿನಿಮಾ ‘ಹನುಮಾನ್’ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ‘ಜೀ 5’ ಒಟಿಟಿ ಮೂಲಕ ‘ಹನುಮಾನ್’ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಈ ಸಿನಿಮಾಗಾಗಿ ಕಾಯುತ್ತಿದ್ದ ಅದೆಷ್ಟೋ ಸಿನಿ ರಸಿಕರಿಗೆ ಈ ಸುದ್ದಿ ಖುಷಿ ಕೊಟ್ಟಿದೆ.
ಈ ಚಿತ್ರದಲ್ಲಿ ತೇಜ ಸಜ್ಜಾ ಅವರು ಹೀರೋ, ಅಮೃತಾ ಅಯ್ಯರ್ ಹೀರೋಯಿನ್ ಆಗಿ ನಟಿಸಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನ ಮಾಡಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರದಲ್ಲಿ ‘ಹನುಮಾನ್’ ಸಿನಿಮಾ ಬಿಡುಗಡೆ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಹನುಮಾನ್’ ತೆರೆಕಂಡಿತ್ತು. ಸದ್ಯಕ್ಕೆ ‘ಜೀ 5’ ಒಟಿಟಿಯಲ್ಲಿ ತೆಲುಗು ವರ್ಷನ್ ಮಾತ್ರ ಲಭ್ಯವಾಗಿದೆ. ಕನ್ನಡ, ತಮಿಳು, ಮಲಯಾಳಂ ವರ್ಷನ್ಗಾಗಿ ಪ್ರೇಕ್ಷಕರು ಕಾದಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ ‘ಹನುಮಾನ್’ ಸಿನಿಮಾದ ಹಿಂದಿ ವರ್ಷನ್ ವೀಕ್ಷಿಸಬಹುದು.
ಆಂಜನೇಯನ ಕೃಪೆಯಿಂದ ಸೂಪರ್ ಪವರ್ ಪಡೆಯುವ ಯುವಕನ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.