ನಾದಬ್ರಹ್ಮ ಎಂದೇ ಖ್ಯಾತಿ ಪಡೆದಿರುವ ಹಂಸಲೇಖ ಅವರು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಾಡುಗಳನ್ನು ನೀಡಿದ್ದಾರೆ. ಅವರ ಹಾಡುಗಳು ಈಗಲೂ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಅವರ ಸಾಹಿತ್ಯಕ್ಕೆ ತಲೆದೂಗಿದವರೇ ಹೆಚ್ಚು.ಆದರೆ, ಇತ್ತೀಚೆಗೆ ಅವರು ಜೈನ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಅನೇಕರು ಹಂಸಲೇಖ ಬಳಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಅಂತೆಯೇ ಹಂಸಲೇಖ ಅವರು ಕ್ಷಮೆ ಕೇಳಿದ್ದಾರೆ.
ಹಂಸಲೇಖ ಹೇಳಿದ್ದು ಏನು?
ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಹಂಸಲೇಖ ಅವರು ‘ಜೈನರ ಫಿಲಾಸಫಿಯಲ್ಲಿ 24 ಜನ್ಮಗಳು ಇವೆಯಂತೆ. ಅದೆಲ್ಲ ಸುಳ್ಳು, ಬುಲ್ಶಿಟ್’ ಎಂದು ಹೇಳಿದ್ದರು ಹಂಸಲೇಖ. ಇದಕ್ಕೆ ಜೈನ ಧರ್ಮದವರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಹಂಸಲೇಖ ಅವರು ಸಾರ್ವಜನಿಕವಾಗಿ ಜೈನ ಧರ್ಮವನ್ನು ಹೀಯಾಳಿಸಿದ್ದು ಸರಿ ಅಲ್ಲ. ಜಗತ್ತಿನ ಅತೀ ದೊಡ್ಡ ಅಂಹಿಸಾಮಯ ಹಾಗೂ ದಾನಧರ್ಮಗಳಲ್ಲಿ ಅಗ್ರ ಸ್ಥಾನದಲ್ಲಿ ಇರುವ ಜೈನ ಧರ್ಮವನ್ನು ಟೀಕಿಸಿದ ಹಂಸಲೇಖ ಈಗಲೇ ಕ್ಷಮೆ ಕೇಳಬೇಕು’ ಎಂದು ಜೈನ ಧರ್ಮದವರು ಆಗ್ರಹಿಸಿದ್ದರು.
ಈಗ ಹಂಸಲೇಖ ಅವರು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಇದು ಬಾಯ್ತಪ್ಪಿನಿಂದ ಆಡಿರೋ ಮಾತು ಎಂದಿರೋ ಅವರು, ಇನ್ಮುಂದೆ ಈ ರೀತಿಯ ತಪ್ಪನ್ನು ಮಾಡುವುದಿಲ್ಲ ಎನ್ನುವ ಭರವಸೆ ನಿಡಿದ್ದಾರೆ.

