ಗುವಾಹಟಿ: ಅಸ್ಸಾಮಿಯ ಹಿರಿಯ ನಟ ನಿಪ್ಪನ್ ಗೋಸ್ವಾಮಿ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
80 ವರ್ಷದ ಗೋಸ್ವಾಮಿ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಹೃದಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಸೋಮವಾರದಿಂದ ಅವರ ಆರೋಗ್ಯ ಹದಗೆಟ್ಟಿತ್ತು.
ಗೋಸ್ವಾಮಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
“ಅಸ್ಸಾಮಿ ಚಿತ್ರೋದ್ಯಮಕ್ಕೆ ಪ್ರವರ್ತಕ ಕೊಡುಗೆ ನೀಡಿದ ನಿಪ್ಪನ್ ಗೋಸ್ವಾಮಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ವೈವಿಧ್ಯಮಯ ಕೃತಿಗಳನ್ನು ಹಲವಾರು ಚಲನಚಿತ್ರ ಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ. ” ಎಂದು ಟ್ವೀಟ್ ಮಾಡಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಹಿರಿಯ ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಗೋಸ್ವಾಮಿ ಅವರ ನಿಧನಕ್ಕೆ ರಾಜ್ಯದ ಇತರ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
ಗೋಸ್ವಾಮಿ ಅವರು ಅಸ್ಸಾಂನ ತೇಜ್ ಪುರ್ ಪಟ್ಟಣದಲ್ಲಿ ಜನಿಸಿದರು. ಅವರು ಪ್ರತಿಷ್ಠಿತ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಹಳೆಯ ವಿದ್ಯಾರ್ಥಿಯಾಗಿದ್ದರು. ಅವರು ೧೯೫೭ ರಲ್ಲಿ ಬಾಲ ಕಲಾವಿದರಾಗಿ ಅಸ್ಸಾಮಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.