Bengaluru 27°C
Ad

ಅಮೆರಿಕದ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಕನ್ನಡತಿ ಡಾ. ಶ್ರುತಿಗೆ ಕಿರೀಟ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ, ಹುಬ್ಬಳಿಯ ವೈದ್ಯೆ ಶ್ರುತಿ ಹೆಗಡೆ ಇತ್ತೀಚಿಗೆ ಅಮೆರಿಕದಲ್ಲಿ ಜರುಗಿದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ವಾಷಿಂಗ್ಟನ್‌: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ, ಹುಬ್ಬಳಿಯ ವೈದ್ಯೆ ಶ್ರುತಿ ಹೆಗಡೆ ಇತ್ತೀಚಿಗೆ ಅಮೆರಿಕದಲ್ಲಿ ಜರುಗಿದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಅದರಲ್ಲೂ ಕನ್ನಡತಿ ಆಗಿರುವುದು ಇನ್ನೂ ಹೆಮ್ಮೆಯ ವಿಚಾರ.ಅಮೆರಿಕದಲ್ಲಿ ನಡೆದ ಮಿಸ್ ಯೂನಿವರ್ಸಲ್‌ ಪೆಟೀಟ್‌ ಎನ್ನುವ ಸೌಂದರ್ಯ ಸ್ಪರ್ಧೆಯಲ್ಲಿ ಶ್ರುತಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

Ad
300x250 2

ವಿಶೇಷ ಎಂದರೆ‌ ಶ್ರುತಿ ಮಿಸ್ ಯೂನಿವರ್ಸಲ್‌ ಪೆಟೀಟ್‌ ಟೈಟಲ್‌ ಗೆದ್ದ ಮೊದ ಭಾರತೀಯ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಶ್ರುತಿ 40 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ.

ಶಿರಸಿ, ಹುಬ್ಬಳ್ಳಿ ಮೂಲ
ಶ್ರುತಿ ಅವರು ಶಿರಸಿ ಮತ್ತು ಹುಬ್ಬಳ್ಳಿ ನಂಟು ಹೊಂದಿದ್ದಾರೆ. ಶಿರಸಿ ತಾಲೂಕಿನ ಮುಂಡಿಗೆಸರ ಅಜ್ಜೊರಮನೆ ಕುಟುಂಬದವರಾದ ಶ್ರುತಿ ಸದ್ಯ ತಮ್ಮ ಪಾಲಕರಾದ ಕೃಷ್ಣ ಹೆಗಡೆ, ಕಮಲಾ ಅವರೊಂದಿಗೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. 2018ರಲ್ಲಿ ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ ಕೀರೀಟ ತೊಟ್ಟುಕೊಂಡಿದ್ದ ಶ್ರುತಿ ಕಳೆದ ವರ್ಷ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದರು.

 

Ad
Ad
Nk Channel Final 21 09 2023
Ad