News Karnataka Kannada
Saturday, May 11 2024
ಮನರಂಜನೆ

‘ತಲೈವರ್​ 170’ ಚಿತ್ರತಂಡದಿಂದ ರಜನಿಕಾಂತ್​ ಫಸ್ಟ್​ ಲುಕ್​ ರಿಲೀಸ್‌

First look of Rajinikanth from 'Thalaivar 170' released
Photo Credit : News Kannada

ನಟ ರಜನಿಕಾಂತ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ವರ್ಷ ಬಿಡುಗಡೆ ಆದ ಅವರ ‘ಜೈಲರ್’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು.

ಅಭಿಮಾನಿಗಳು ಆ ಚಿತ್ರವನ್ನು ಸಖತ್​ ಇಷ್ಟಪಟ್ಟರು. ಅದರ ಬೆನ್ನಲ್ಲೇ ರಜನಿಕಾಂತ್ ನಟನೆಯ ಮುಂದಿನ ಸಿನಿಮಾದ ಬಗ್ಗೆ ಹೊಸ ಹೊಸ ಅಪ್​ಡೇಟ್​ ಸಿಗುತ್ತಿದೆ. ರಜನಿ ಅಭಿನಯಿಸಲಿರುವ 170ನೇ ಸಿನಿಮಾದಿಂದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ. ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆ ಮೂಲಕ ‘ತಲೈವರ್​ 170’ ಸಿನಿಮಾ ಮೂಡಿಬರುತ್ತಿದೆ. ‘ಜೈ ಭೀಮ್​’ ಸಿನಿಮಾ ಖ್ಯಾತಿಯ ಟಿಜೆ ಜ್ಞಾನವೇಲ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಸದ್ಯಕ್ಕೆ ‘ತಲೈವರ್​ 170’ ಎಂದು ಕರೆಯಲಾಗುತ್ತಿದೆ. ಅಮಿತಾಭ್​ ಬಚ್ಚನ್​ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು