ಸ್ಯಾಂಡಲ್‌ವುಡ್‌ನಲ್ಲಿ ಮಹಿಳೆಯರ ಸುರಕ್ಷತೆಗೆ ಕಮಿಟಿಯಾಗಬೇಕು ಎಂದು ಫೈರ್ ಸಂಸ್ಥೆ ಇಂದು ಸಿಎಂಗೆ ಮನವಿ ಸಲ್ಲಿಸಿದ ಬಳಿಕ ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟೋ ತಲೆಮಾರಿನಿಂದ ಮಹಿಳೆಯರು ಲೈಂಗಿಕ ಕಿರುಕುಳ ಎದುರಿಸುತ್ತಿದ್ದಾರೆ ಅದನ್ನು ಕಿತ್ತೆಸೆಯಬೇಕು ಎಂದು ನಟ ಚೇತನ್ ಮಾತನಾಡಿದ್ದಾರೆ.
ಇಂದು 153 ಜನ ಕಲಾವಿದರು ಸಹಿ ಮಾಡಿರುವ ಪ್ರತಿಯನ್ನು ಸಿಎಂಗೆ ಸಲ್ಲಿಸಿದ್ದೇವೆ. ಸದ್ಯದಲ್ಲೇ ಇದರ ಬಗ್ಗೆ ಚರ್ಚೆ ನಡೆಸಲು ಮತ್ತೊಂದು ಸಭೆ ಮಾಡೋಣ ಎಂದು ಅವರು ತಿಳಿಸಿದ್ದಾರೆ ಎಂದು ಚೇತನ್ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಎಷ್ಟೋ ತಲೆಮಾರಿನಿಂದ ಲೈಂಗಿಕ ಕಿರುಕುಳ ಇದೆ ಅಂತ ಕೂಗು ಕೇಳಿ ಬರುತ್ತಿದೆ. ಅದನ್ನ ಕಿತ್ತು ಎಸೆಯಬೇಕು ಅಂತ ಈ ಫೈರ್ ಸಂಸ್ಥೆ ಮುಂದಾಗಿದೆ ಎಂದು ಚೇತನ್ ಹೇಳಿದರು.

