ತೆಲುಗು ಚಿತ್ರರಂಗದ ಹೆಸರಾಂತ ನಟ ಪ್ರಭಾಸ್ ಅಭಿನಯದ ‘ಫೌಜಿ’ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಬಹುನಿರೀಕ್ಷಿತ ಈ ಚಿತ್ರ ಡಿಸೆಂಬರ್ 3ರಂದು ತೆರೆಕಾಣಲಿದೆ. ನಿರ್ದೇಶಕ ಹನು ರಾಘವಪುಡಿ ಅವರ ಚಿತ್ರದ ಆಕರ್ಷಕ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡವು ಬಿಡುಗಡೆ ದಿನವನ್ನು ಖಚಿತಪಡಿಸಿದೆ.

‘ಅಜ್ಞಾತಪರ್ವ ಎಂಡ್ಸ್’ ಎಂಬ ಕುತೂಹಲಕಾರಿ ಘೋಷಣೆ ಇದೆ. ಪ್ರಭಾಸ್ ಅವರೂ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. ರಕ್ತಸಿಕ್ತ ಉಡುಪಿನಲ್ಲಿ, ಶವಗಳ ನಡುವೆ ಕಲ್ಲಿನ ಮೇಲೆ ಗನ್ ಹಿಡಿದಿರುವ ಪ್ರಭಾಸ್ ಲುಕ್‌ ಗಮನಾರ್ಹವಾಗಿದೆ.

‘ಬಾಹುಬಲಿ’ ನಂತರ ಇದು ಪ್ರಭಾಸ್ ತಾರಾಗಣದ ಬೃಹತ್ ಪೀರಿಯಡ್ ಡ್ರಾಮಾ ಕಥೆಯುಳ್ಳ ಚಿತ್ರ. ‘ಎ ಬೆಟಾಲಿಯನ್‌ ಹೂ ಫೈಟ್ಸ್‌ ಅಲೋನ್‌’ ಅಡಿಸಾಲು ಚಿತ್ರಕ್ಕಿದೆ. ದಕ್ಷಿಣ ಭಾರತದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯರ್ನೇನಿ ಮತ್ತು ವೈ.ರವಿಶಂಕರ್ ಅವರು ಟಿ-ಸೀರೀಸ್ ಫಿಲ್ಮ್ಸ್‌ನ ಭೂಷಣ್ ಕುಮಾರ್ ಜೊತೆಗೂಡಿ ಚಿತ್ರ ನಿರ್ಮಿಸಿದ್ದಾರೆ