ಪ್ರೇಮ, ಕೌಟುಂಬಿಕ ಕಥನವುಳ್ಳ ಚಿತ್ರಗಳಿಂದ ಗಮನ ಸೆಳೆದಿರುವ ಡಾರ್ಲಿಂಗ್ ಕೃಷ್ಣ ಮತ್ತು ಹಿರಿಯ ನಟ ಪ್ರಕಾಶ್ ರಾಜ್ ಈಗ ‘ಫಾದರ್’ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಶೀರ್ಷಿಕೆಯೊಂದಿಗೆ ಇದು ಕೌಟುಂಬಿಕ ಕಥನದ ಚಿತ್ರ ಎಂಬ ಇಂಗಿತ ನೀಡಿರುವ ಚಿತ್ರತಂಡ, ಇದೇ 25ರಂದು ಚಿತ್ರದ ಟೀಸರ್ ಅನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೆ ಸಿದ್ಧತೆ ನಡೆಸಿದೆ.
ನಿರ್ದೇಶಕ ರಾಜಮೋಹನ್ ಅವರು ಆ್ಯಕ್ಷನ್, ಕಟ್ ಹೇಳಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಪ್ರಕಾಶ್ ರಾಜ್ ಒಟ್ಟಿಗಿರುವ ಚಿತ್ರಗಳು ಗಮನಸೆಳೆದಿವೆ. ಆರ್.ಚಂದ್ರು ಅವರೇ ಆರ್.ಸಿ.ಸ್ಟುಡಿಯೋಸ್ ಮೂಲಕ ನಿರ್ಮಿಸುತ್ತಿದ್ದಾರೆ.
‘ಫಾದರ್’, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಕನೆಕ್ಟ್ ಆಗುವ ಕಥನದ ಚಿತ್ತ. ಅದ್ಭುತ ಎಮೋಷನಲ್ ಜರ್ನಿ ಆಗಿರಲಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಮ್ಯಾಕೀಸ್ ಸಂಸ್ಥೆ ‘ಫಾದರ್’ ಚಿತ್ರದ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ.

