ಮೊಹಾಲಿ ರೆಸ್ಟೋರೆಂಟ್ ನಲ್ಲಿ ನಿನ್ನೆ ಖ್ಯಾತ ಸಂಗೀತ ಸಂಯೋಜಕ, ಗಾಯಕ ಪಂಜಾಬಿನ ಬಂಟಿ ಬೈನ್ಸ್ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆಂದು ವರದಿಯಾಗಿದೆ.
ಈ ವೇಳೆ ಬಂಟಿ ಬೈನ್ಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಯಾವುದೇ ಗುಂಡು ತಗುಲಿಲ್ಲ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳು ವರದಿ ಮಾಡಿದಂತೆ ವ್ಯಕ್ತಿಯೊಬ್ಬ ಒಂದು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದನಂತೆ. ಬಂಟಿ ದುಡ್ಡನ್ನು ಕೊಡದೇ ಇರುವ ಕಾರಣಕ್ಕಾಗಿ ಈ ಶೂಟೌಟ್ ನಡೆದಿದೆ ಎನ್ನಲಾಗುತ್ತಿದೆ.