ನಟಿ, ನಿರ್ದೇಶಕಿ ಕಂಗನಾ ರನೌತ್ ಬಹುನಿರೀಕ್ಷಿತ ʼಎಮರ್ಜೆನ್ಸಿ’ ಸಿನಿಮಾ ಬಿಡುಗಡೆಗೆ ದಿನಾಂಕ ಘೋಷಿಸಿದ್ದಾರೆ. ಬಿಜೆಪಿ ಸಂಸದೆ ಕಂಗನಾ ಈಗ ಬಿಜೆಪಿ ಸಂಸದೆಯಾಗಿದ್ದಾರೆ. ಕಂಗನಾ ರನೌತ್ ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಭಾರಿ ಅಂತರದ ಜಯ ಪಡೆದಿದ್ದಾರೆ.

ಇಷ್ಟು ವರ್ಷ ಸಿನಿಮಾ ನಟಿಯಾಗಿ, ನಿರ್ದೇಶಕಿಯಾಗಿ ಗಮನ ಸೆಳೆದಿದ್ದ ಕಂಗನಾ ಇನ್ನು ಮುಂದೆ ಸಂಸದೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಂಗನಾ ಚುನಾವಣೆಗೆ ಸ್ಪರ್ಧಿಸುವ ಮುಂಚೆ ಇಂದಿರಾ ಗಾಂಧಿ ಕುರಿತಾದ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ನಟಿಸಿದ್ದರು. ಚುನಾವಣೆ ಕಾರಣಕ್ಕೆ ಈ ಸಿನಿಮಾದ ಬಿಡುಗಡೆ ಮುಂದೂಡಲಾಗಿತ್ತು, ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.

‘ಎಮರ್ಜೆನ್ಸಿ’ ಸಿನಿಮಾವನ್ನು ಕಂಗನಾ ಸೆಪ್ಟೆಂಬರ್ 6 ರಂದು ತೆರೆಗೆ ತರಲಿದ್ದಾರೆ. ಕಂಗನಾ ಸಂಸದೆಯಾಗಿ ಆಯ್ಕೆ ಆದ ಬಳಿಕ ಈ ಸಿನಿಮಾ ಬಿಡುಗಡೆ ಆಗುತ್ತದೆಯೇ ಇಲ್ಲವೇ ಎಂಬ ಅನುಮಾನ ಮೂಡಿತ್ತು. ಆದರೆ ಕೊನೆಗೂ ಸಿನಿಮಾದ ಬಿಡುಗಡೆ ದಿನಾಂಕವನ್ನು ಕಂಗನಾ ಘೋಷಣೆ ಮಾಡಿದ್ದಾರೆ. ಸಿನಿಮಾದಲ್ಲಿ ಕಂಗನಾ, ಇಂದಿರಾ ಗಾಂಧಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಇಂದಿರಾ ಗಾಂಧಿಯ ಗಟ್ಟಿ ವ್ಯಕ್ತಿತ್ವದ ಅನಾವರಣ ಮಾಡಲಾಗಿದೆ ಎನ್ನಲಾಗುತ್ತಿದೆ.