ಸ್ಯಾಂಡಲ್​ವುಡ್ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಆಗಸ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಇವರ ಮದುವೆ ಸಮಾರಂಭವಿದ್ದು ಅತಿಥಿಗಳ ಆಹ್ವಾನಕ್ಕೆ ವಿಶೇಷ ಆಮಂತ್ರಣ ಪತ್ರಿಕೆಯನ್ನು ತಯಾರು ಮಾಡಿಸಿದ್ದಾರೆ. ಪರಿಸರ ಸ್ನೇಹಿ ಮದುವೆ ಆಮಂತ್ರಣ ಪತ್ರಿಕೆಯನ್ನು ವಿನ್ಯಾಸ ಮಾಡಿಸುವ ಮೂಲಕ ಮಾದರಿಯಾಗಿದ್ದಾರೆ.

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಖಾಲಿ ಹಾಳೆ, ಬರೆಯಲು ಪೆನ್ಸಿಲ್ ಮತ್ತು ಪೆನ್ನುಗಳಿವೆ. ಆಮಂತ್ರಣ ಪತ್ರಿಕೆಯಲ್ಲಿ ಇರುವ ಎಲ್ಲ ವಸ್ತುಗಳಲ್ಲಿಯೂ ಬೀಜಗಳಿದ್ದು ಅವನ್ನು ಮಣ್ಣಿಗೆ ಹಾಕಿದರೆ ಹೂವು, ತರಕಾರಿ ಗಿಡಗಳು ಬಳೆಯುತ್ತವೆ. ಜೊತೆಗೆ ಚಾಕಲೇಟ್​ಗಳನ್ನು ಸಹ ಈ ಜೋಡಿ ಆಮಂತ್ರಣ ಪತ್ರಿಕೆಯಲ್ಲಿ ಇರಿಸಿದೆ.