ಬೆಂಗಳೂರು: ಕೆಲವು ದಿನಗಳಿಂದ ವಿಚ್ಛೇದನದ ಸುದ್ದಿಯೇ ಕೇಳಲು ಸಿಗುತ್ತಿವೆ ಅದರಲ್ಲೂ ನಟ, ನಟಿಯರಲ್ಲೇ ಹೆಚ್ಚು. ಇದೀಗ ದುನಿಯಾ ವಿಜಯ್- ಪತ್ನಿ ನಾಗರತ್ನ ನಡುವೆ ವಿಚ್ಛೇದನ ತೀರ್ಪು ಇಂದು ಗೊತ್ತಾಗಲಿದೆ. ದುನಿಯಾ ವಿಜಯ್ ಹಾಗೂ ನಾಗರತ್ನ ಮಧ್ಯೆ ವೈಮನಸ್ಸು ಮೂಡಿತ್ತು. ಹೀಗಾಗಿ 2018ರಲ್ಲಿ ವಿಜಯ್ ಅವರು ವಿಚ್ಛೇದನ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು.
ವಿಜಯ್ ಮಕ್ಕಳ ಜವಬ್ದಾರಿಯನ್ನು ಹೊತ್ತುಕೊಳ್ಳಲು ತಯಾರಿದ್ದಾರೆ ಅಲ್ಲದೇ ಪತ್ನಿಗೆ ಜೀವನಾಂಶ ನೀಡಲು ತಯಾರಿದ್ದಾರೆ. ಆದರೆ, ಕೋರ್ಟ್ಗೆ ಹೋದಾಗಲೆಲ್ಲ ನಾಗರತ್ನ ಅವರು ಪತಿಯನ್ನು ಬಿಡಲು ಒಪ್ಪಿಲ್ಲ. ಹೀಗಾಗಿ ಪ್ರಕರಣ ಮುಂದೂಡುತ್ತಲೇ ಬರುತ್ತೊದೆ. ಇಂದು ಪ್ರಕರಣದ ತೀರ್ಪು ಹೊರ ಬರಲಿದೆ.

