ಸ್ಯಾಂಡಲ್​ವುಡ್​​ ನಟ ಡಾಲಿ ಧನಂಜಯ್​ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಜ್ಜಿಯ ಆಸೆಯಂತೆ ಮದುವೆ ಆಗಬೇಕು ಎಂದಿದ್ದಾರೆ. ಡಾಲಿ ಧನಂಜಯ್​ ಮದುವೆ ವಿಚಾರ ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ ಡಾಲಿ ಈ ಬಗ್ಗೆ ಅಷ್ಟೇನು ತಲೆ ಕೆಡೆಸಿಕೊಂಡಿರಲಿಲ್ಲ. ಆಗುವ ಸಮಯ ಬಂದಾಗ ಆಗೋದು ಎಂದು ಹೇಳುತ್ತಾ ಬಂದಿದ್ದಾರೆ. ಆದರೀಗ ಅಭಿಮಾನಿಗಳ ಕುತೂಹಲದ ಪ್ರಶ್ನೆಗೆ ಡಾಲಿ ಉತ್ತರಿಸಿದ್ದಾರೆ

ಡಾಲಿ ಮದುವೆ ವಿಚಾರವಾಗಿ ಮಾತನಾಡಿದ್ದು, ಇಷ್ಟರಲ್ಲೇ ಮದುವೆ ಆಗ್ತೀನಿ ಎಂದಿದ್ದಾರೆ. ನಾನು ಮದುವೆ ಆಗ್ಬೇಕು ಅನ್ನೋದು ನಮ್ಮ ಅಜ್ಜಿಯ ಆಸೆ. ಆದಷ್ಟು ಬೇಗ ನಾನೂ ಮದುವೆ ಆಗ್ತೀನಿ ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ಇಂಡಸ್ಟ್ರಿ ಬಗ್ಗೆ ಕೆಟ್ಟದಾಗಿ ಮಾತಾಡೋದು ಬಿಡಿ. ನಾವೇ ನಮ್ಮ ಇಂಡಸ್ಟ್ರಿ ಬಗ್ಗೆ ನೆಗಟಿವ್ ಆಗಿ ಮಾತಾಡಬಾರದು. ನಿರಂತರವಾಗಿ ಕೆಲಸ ಮಾಡ್ಬೇಕು. ಅದರಿಂದಷ್ಟೇ ಇಂಡಸ್ಟ್ರಿ ಉಳಿಯೋದು ಎಂದು ಹೇಳಿದ್ದಾರೆ.