ಬೆಂಗಳೂರು: ಸ್ಯಾಂಡಲ್‌ವುಡ್‌ನ ನಟ ಡಾಲಿ ಧನಂಜಯ್ ಧನ್ಯತಾ ದಂಪತಿಯ ಬಾಳಿಗೆ ಪುಟ್ಟ ಅತಿಥಿಯ ಆಗಮನವಾಗಿದೆ. ಶುಕ್ರವಾರ ತಡರಾತ್ರಿ ಧನ್ಯತಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಮೈಸೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಗುವಿನ ಆಗಮನದ ಸುದ್ದಿಯನ್ನು ಡಾಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಫೋಟೋ ಹಂಚಿಕೊಂಡಿದ್ದಾರೆ. “ನಮ್ಮ ಮನೆಗೆ ಪುಟ್ಟ ಡಾಲಿ ಬಂದಿದ್ದಾನೆ” ಎಂದು ಅಭಿಮಾನಿಗಳು ಕಮೆಂಟ್ಸ್ ಹಾಕಿ ಸಂಭ್ರಮಿಸುತ್ತಿದ್ದಾರೆ.

