ನನ್ನರಸಿ ರಾಧೆ, ಕರಿಮಣಿ ಸೀರಿಯಲ್ ನಿರ್ದೇಶಕ ವಿನೋದ್ ದೊಂಡಾಲೆ ಅವರ ಅಂತ್ಯಕ್ರಿಯೆ ಇಂದು ಮರಾಠ ಸಂಪ್ರದಾಯದಂತೆ ನೆರವೇರಿತು.
ನಾಗರಭಾವಿ ನಿವಾಸದಲ್ಲಿ ಆಪ್ತರಿಗೆ ಇಂಡಸ್ಟ್ರಿಯವರಿಗೆ ವಿನೋದ್ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇಂದು ಮಧ್ಯಾಹ್ನ ನಗರದ ಚಾಮರಾಜೇಟೆಯ ಟಿ.ಆರ್ ಮಿಲ್‌ನಲ್ಲಿ ಹಿಂದೂ ಮರಾಠ ಸಂಪ್ರದಾಯದಂತೆ ವಿನೋದ್ ಅಂತ್ಯಕ್ರಿಯೆ ಜರುಗಿದೆ.
ಸಾಲದ ಸುಳಿಯಲ್ಲಿ ಸಿಲುಕಿದ್ದ ವಿನೋದ್ ಜು.20ರಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿರ್ದೇಶಕ ವಿನೋದ್ ಅವರ ಸಿನಿಮಾ ಮಾಡುವ ಕನಸು ಮಾತ್ರ ಅರ್ಧದಲ್ಲೇ ಕಮರಿ ಹೋಗಿರೋದು ದುರಂತ.

