ನಟಿಯರ ಖಾಸಗಿ ವಿಡಿಯೋಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಈ ಬಗ್ಗೆ ಸಾಕಷ್ಟು ನಟಿಯರು ಆಕ್ರೋಶ ಹೊರ ಹಾಕಿದ್ದು ಇದೆ. ಆದರೆ ಇದೀಗ ಖ್ಯಾತ ನಟಿ ಊರ್ವಶಿ ರೌಟೆಲ್ಲಾ ಪ್ರಚಾರಕ್ಕಾಗಿ ತಮ್ಮ ಸ್ವತಃ ಖಾಸಗಿ ವಿಡಿಯೋವನ್ನೇ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಊರ್ವಶಿ ರೌಟೆಲ್ಲಾ ಬಾತ್​ರೂಂನಲ್ಲಿ ವಿವಸ್ತ್ರಗೊಂಡಿದ್ದಾರೆ.

ಆದರೆ ಈ ವಿಡಿಯೋವನ್ನು ಪ್ರಚಾರಕ್ಕಾಗಿ ಖುದ್ದು ಊರ್ವಶಿಯೇ ಲೀಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೆಲವು ನಟಿಯರು ತಮ್ಮ ಪ್ರಚಾರಕ್ಕಾಗಿ ಯಾವೇ ಹಂತಕ್ಕೆ ಬೇಕಾದರು ಹೋಗುತ್ತಾರೆ ಅನ್ನೋದು ಗೊತ್ತೆ ಇದೆ. ಇತ್ತೀತೆಗೆ ನಟಿ ಪೂನಾಂ ಪಾಂಡೆ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾಗಿ ಸುದ್ದಿಯಾಗಿದ್ದರು. ಬಳಿಕ ಇದೆಲ್ಲಾ ಜಸ್ಟ್ ಪ್ರಚಾರಕ್ಕೆ ಎಂದು ಹೇಳುವ ಮೂಲಕ ಸಾಕಷ್ಟು ಆಕ್ರೋಶ ಎದುರಿಸಿದ್ದರು.

ವಿಡಿಯೋನಲ್ಲಿ ಕುರ್ತಾ ಧರಿಸಿರುವ ಊರ್ವಶಿ ರೌಟೆಲಾ, ಸ್ನಾನ ಮಾಡಲೆಂದು ಬಾತ್​ರೂಂಗೆ ತೆರಳುತ್ತಿದ್ದಾರೆ. ಊರ್ವಶಿ ಟವೆಲ್ ಅನ್ನು ಹ್ಯಾಂಗರ್​ಗೆ ನೇತುಹಾಕಿ ತಮ್ಮ ಬಟ್ಟೆ ಕಳೆಯಲು ಮುಂದಾಗುತ್ತಾರೆ ಅಲ್ಲಿಗೆ ವಿಡಿಯೋ ಎಂಡ್ ಆಗಿದೆ. ಅಂದ ಹಾಗೆ ಈ ವಿಡಯೋದಲ್ಲಿ ಊರ್ವಶಿ ಕೊರಳಿನಲ್ಲಿ ಮಾಂಗಲ್ಯ ಸರವು ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಊರ್ವಶಿ ರೌಟೆಲ್ಲಾ ಬಾತ್​ರೂಂ ವಿಡಿಯೋ ಲೀಕ್ ಎಂಬ ಅಡಿಬರಹದೊಂದಿಗೆ ವೈರಲ್ ಮಾಡಲಾಗುತ್ತಿದೆ.

ಆದರೆ ಇದು ಪ್ರಚಾರಕ್ಕಾಗಿ ವೈರಲ್ ಮಾಡಿರುವ ವಿಡಿಯೋ ಎಂದು ಹಲವು ನೆಟ್ಟಿಗರು ಆರೋಪಿಸಿದ್ದು, ಕಮೆಂಟ್ ಮಾಡಿದ್ದಾರೆ. ಈ ಹಿಂದೆಯೂ ಕೆಲವು ಬಾರಿ ಊರ್ವಶಿ ರೌಟೆಲ್ಲಾ ಪ್ರಚಾರಕ್ಕಾಗಿ ಕೆಲವು ಸ್ಟಂಟ್​ಗಳನ್ನು ಮಾಡಿದ್ದಿದೆ. ಈ ಹಿಂದೆ ತಮ್ಮ ತಾರಾ ಮೌಲ್ಯದ ಬಗ್ಗೆ ಸುಳ್ಳು ಹೇಳಿ ಟ್ರೋಲ್ ಆಗಿದ್ದರು. ರಿಷಬ್ ಪಂತ್ ಬಗ್ಗೆ ಮಾತನಾಡಿಯೂ ಟ್ರೋಲ್ ಆಗಿದ್ದರು.