ಸ್ಯಾಂಡಲ್ವುಡ್ ಸ್ಟಾರ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ , ತಮ್ಮ ಆತ್ಮೀಯ ಗೆಳೆಯ ಅಶ್ವಿನ್ ಎಂಬುವರಿಗೆ ಅವರ ಹುಟ್ಟುಹಬ್ಬದಂದು 52 ಲಕ್ಷ ಮೌಲ್ಯದ ಟೊಯೋಟಾ ಫಾರ್ಚುನರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಶ್ವಿನ್ ಹುಟ್ಟುಹಬ್ಬದಂದು ಗೆಳೆಯನನ್ನು ಕರೆದುಕೊಂಡು ಹೋಗಿ ಸ್ವತಃ ಅವರಿಗೇ ಆಶ್ಚರ್ಯವಾಗುವಂತೆ ಸರ್ಪ್ರೈಸ್ ಗಿಫ್ಟ್ ಆಗಿ ಕಾರನ್ನು ನೀಡಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ, ತಮ್ಮ ಗೆಳೆಯನಿಗೆ ಸರ್ಪ್ರೈಸ್ ಉಡುಗೊರೆ ನೀಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಧ್ರುವ ಸರ್ಜಾ ಅವರಿಂದ ಸಿಕ್ಕ ದುಬಾರಿ ಉಡುಗೊರೆ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಅಶ್ವಿನ್, ”ಹೀಗೊಂದು ಉಡುಗೊರೆ ಕೊಡುತ್ತಾರೆ ಎಂಬುದು ನನಗೇ ಗೊತ್ತಿರಲಿಲ್ಲ. ಸರ್ಪ್ರೈಸ್ ಆಗಿ ಎಲ್ಲವನ್ನು ಪ್ಲ್ಯಾನ್ ಮಾಡಿ ಉಡುಗೊರೆ ಕೊಟ್ಟಿದ್ದಾರೆ. ನಾನು ನೋಡದೇ ಇದ್ದ ಅಪ್ಪ-ಅಮ್ಮನ ಫೋಟೊ ಸಹ ಕೊಟ್ಟಿದ್ದಾರೆ. ಧ್ರುವ ಸರ್ಜಾ ಗೆಳೆತನಕ್ಕೆ ಬಹಳ ಬೆಲೆ ಕೊಡುವ ವ್ಯಕ್ತಿ. ಎಷ್ಟೋ ಜನರಿಗೆ ಅವರು ಸಹಾಯ ಮಾಡಿದ್ದಾರೆ.
ಸಾಕಷ್ಟು ಜನರ ಆಸ್ಪತ್ರೆ ಬಿಲ್ ಕೊಟ್ಟಿದ್ದಾರೆ. ಶಾಲೆಯ ಫೀಸು ಕೊಟ್ಟಿದ್ದಾರೆ. ಬಂದವರಿಗೆಲ್ಲ ಸಹಾಯ ಮಾಡಿದ್ದಾರೆ. ಆದರೆ ಯಾವುದನ್ನೂ ಪ್ರಚಾರ ಮಾಡಿಕೊಂಡವರಲ್ಲ. ನನಗೂ ಸಹ ಈ ಉಡುಗೊರೆ ಕೊಟ್ಟ ವಿಡಿಯೋ ಹೊರಗೆ ಹೋಗಬಾರದು ಎಂದಿದ್ದರು. ಆದರೆ ಅವರು ಮಾಡುವ ಕಾರ್ಯವನ್ನು ಜನರಿಗೆ ಹೇಳಬೇಕು ಎಂದು ವಿಡಿಯೋ ಹಾಕಿಕೊಂಡಿದ್ದೇನೆ” ಎಂದಿದ್ದಾರೆ.