ನಟ ಪ್ರಜ್ವಲ್ ದೇವರಾಜ್ ಅವರಿಗೆ ಇಂದು (ಜುಲೈ 4) ಜನ್ಮದಿನದ ಸಂಭ್ರಮ. ಆದರೆ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ.ಎಂದು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು ಇಂದು ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ನಟನೆಯ ‘ರಾಕ್ಷಸ’ ಹಾಗೂ ‘ಕರಾವಳಿ’ ಸಿನಿಮಾಗಳ ಲುಕ್ ಬಿಡುಗಡೆ ಆಗಿದೆ. ಎರಡೂ ಪೋಸ್ಟರ್ಗಳು ಭಿನ್ನವಾಗಿದ್ದು, ಗಮನ ಸೆಳೆಯುತ್ತಿದೆ.
‘ರಾಕ್ಷಸ’ ಲುಕ್
‘ರಾಕ್ಷಸ’ ಸಿನಿಮಾ ಲುಕ್ ಸಖತ್ ಭಿನ್ನವಾಗಿದೆ. ಇಡೀ ಪೋಸ್ಟರ್ನಲ್ಲಿ ಪ್ರಜ್ವಲ್ ಅವರ ಕಣ್ಣು ಗಮನ ಸೆಳೆದಿದೆ. ಅವರು ಕುರುಡನ ರೀತಿ ಕಾಣಿಸಿಕೊಂಡಿದ್ದಾರೆ.
ಕರಾವಳಿ ಲುಕ್
‘ಕರಾವಳಿ’ ಸಿನಿಮಾದ ಲುಕ್ ಕೂಡ ಬಿಡುಗಡೆ ಆಗಿದೆ. ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಚಿತ್ರಕ್ಕೆ ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಪ್ರಯುಕ್ತ ಬಂದಿರುವ ಈ ಪೋಸ್ಟರ್ ‘ಕರಾವಳಿ’ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಕರಾವಳಿ’ ಚಿತ್ರಕ್ಕೆ ಈಗಾಗಲೇ 60ರಷ್ಟು ಶೂಟಿಂಗ್ ಮುಗಿದಿದೆ. ಸಿನಿಮಾದಲ್ಲಿ ಪ್ರಜ್ವಲ್ಗೆ ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಹುತೇಕ ಶೂಟಿಂಗ್ ಕರಾವಳಿಯ ಸುತ್ತಮುತ್ತವೇ ನಡೆದಿದೆ. ಪಕ್ಕಾ ಹಳ್ಳಿ ಹಿನ್ನೆಲೆಯಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.

