ನಟಿ ದೀಪಿಕಾ ಪಡುಕೋಣೆಗೆ ಮಗುವಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಡೆಲವರಿ ಡೇಟ್ ಫಿಕ್ಸ್ ಆಗಿದೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಇದಾಗಲೇ ಸಾಕಷ್ಟು ಚರ್ಚೆ ಕೂಡ ನಡೆಯುತ್ತಿದೆ. ಹೌದು ಮಗು ಹುಟ್ಟುವ ದಿನಕ್ಕೂ, ರಣಬೀರ್ ಕಪೂರ್‌ಗೂ ವಿಶೇಷ ಸಂಬಂಧವಿದ್ದು, ಇದರ ಬಗ್ಗೆ ಇದೀಗ ರಿವೀಲ್ ಆಗಿದೆ.
ಅಂದಹಾಗೆ ದೀಪಿಕಾ ಅವರ ಮಗು ಸೆಪ್ಟೆಂಬರ್ 28ರಂದು ಮುಂಬೈನಲ್ಲಿ ಜನಿಸಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಸೆಪ್ಟಂಬರ್ ನಲ್ಲಿ ಮಗು ಜನಿಸಲಿದೆ ಎಂದು ಸ್ವತಃ ರಣವೀರ್ ಸಿಂಗ್ ಹಾಗು ದೀಪಿಕಾ ದಂಪತಿ ತಮ್ಮ ಸೊಶೀಯಲ್ ಮಿಡಿಯಾ ಪೇಜ್ ನಲ್ಲಿ ಈ ವಿಚಾರ ಹಂಚಿಕೊಂಡಿದ್ದರು. ಇನ್ನು ಈ ಹುಟ್ಟಿದ ದಿನಕ್ಕೂ ರಣಬೀರ್ ಕಪೂರ್‌ಗೂ ಏನಪ್ಪಾ ಸಂಬಂಧ ಎಂದರೆ, ರಣಬೀರ್ ಕಪೂರ್ ಅವರ ಹುಟ್ಟಿದ ದಿನವೂ ಸೆಪ್ಟೆಂಬರ್ 28. ಈ ಹಿನ್ನೆಲೆಯಲ್ಲಿ ಇವರಿಬ್ಬರಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಎಂದೇ ಹೇಳಲಾಗುತ್ತಿದೆ.
ಅಷ್ಟಕ್ಕೂ ದೀಪಿಕಾ ಮತ್ತು ರಣಬೀರ್ ಕಪೂರ್ ಅವರ ಲವ್ ಸ್ಟೋರಿ ಬಿ-ಟೌನ್‌ನಲ್ಲಿ ಸಕತ್ ಸೌಂಡ್ ಮಾಡಿತ್ತು. 2007ರಲ್ಲಿಯೇ ದೀಪಿಕಾ ಮತ್ತು ರಣಬೀರ್ ಪ್ರೀತಿಸಲು ಶುರುಮಾಡಿದ್ದರು. ರಣಬೀರ್ ಅವರದ್ದು ಮೋಸ ಮಾಡುವ ವ್ಯಕ್ತಿತ್ವ ಎಂದು ಅವರಿವರಿಂದ ಕೇಳಿಸಿಕೊಂಡಿದ್ದರೂ ಅದನ್ನು ದೀಪಿಕಾ ನಂಬಿರಲಿಲ್ಲವಂತೆ. ಆದರೆ ಮತ್ತೊಬ್ಬ ಹುಡುಗಿಯ ಜೊತೆ ರಣಬೀರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಾಗ ದೀಪಿಕಾ ಕಂಗಾಲಾಗಿ ಹೋಗಿದ್ದರು. ನಂತರ ರಣಬೀರ್ ಕಪೂರ್‌ಗೆ ಇನ್ನೊಂದು ಚಾನ್ಸ್ ಕೂಡ ನೀಡಿದ್ದರು. ಆದರೆ ಪ್ರೀತಿ-ಮೋಸ ಎಲ್ಲವೂ ರಣಬೀರ್ ಕಪೂರ್‌ಗೆ ಮಾಮೂಲಾಗಿದ್ದರಿಂದ ಅವರು ಕೇಳದ್ದ ಕಾರಣ, ದೀಪಿಕಾ ಸಂಬಂಧ ಕಡಿದುಕೊಂಡರು ಎನ್ನಲಾಗುತ್ತಿದೆ.

