ಮುಂಬೈ: ಬಾಲಿವುಡ್‌ನ ತಾರಾ ದಂಪತಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಶೀಘ್ರದಲ್ಲೇ ತಮ್ಮ ಎರಡನೇ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ.

ಇದೀಗ ತಮ್ಮ ಮುದ್ದಾದ ಮಗಳು ದುವಾ ಪಡುಕೋಣೆ ಸಿಂಗ್‌ಳ 2ನೇ ವರ್ಷದ ಹುಟ್ಟುಹಬ್ಬದ (ಸೆಪ್ಟೆಂಬರ್ 8) ವಿಶೇಷ ಸಂದರ್ಭದಲ್ಲಿ ಈ ಜೋಡಿ ಸುಂದರ ಬೇಬಿ ಬಂಪ್‌ ಫೋಟೋಶೂಟ್‌ ಹಂಚಿಕೊಂಡಿದೆ.

ಸಾಮಾನ್ಯವಾಗಿ ತಮ್ಮ ಮಗಳ ಮುಖವನ್ನು ಕ್ಯಾಮೆರಾ ಕಣ್ಣಿನಿಂದ ದೂರವೇ ಇಡುತ್ತಿದ್ದ ದೀಪಿಕಾ ಮತ್ತು ರಣವೀರ್‌ ಇದೀಗ ಮಗಳ ಹುಟ್ಟುಹಬ್ಬದ ದಿನದಂದು ಬ್ಲ್ಯಾಕ್ & ವೈಟ್ ಥೀಮ್‌ನಲ್ಲಿ ಕ್ಲಿಕ್ಕಿಸಲಾದ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ದೀಪಿಕಾ ತಮ್ಮ ಬೇಬಿ ಬಂಪ್ ಪ್ರದರ್ಶಿಸಿದ್ದು, ಮಗಳು ದುವಾ ತಂದೆ-ತಾಯಿಯೊಂದಿಗೆ ಮುದ್ದಾಗಿ ಪೋಸ್ ಕೊಟ್ಟಿದ್ದಾಳೆ.