ಬೆಂಗಳೂರು: ದರ್ಶನ್ ಹಾಗೂ ಪವಿತ್ರಾ ಗೌಡ ಆಪ್ತವಾಗಿದ್ದಾರೆ. ಪವಿತ್ರಾ ಗೌಡಗೆ ಕಿರುಕುಳ ನೀಡಿದ್ದರಿಂದಲೇ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಯಿತು ಎಂದು ವರದಿ ಆಗಿದೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ. ಈಗ ದರ್ಶನ್ ಅವರು ಪವಿತ್ರಾ ಮೇಲೂ ಹಲ್ಲೆ ಮಾಡಿದ್ದರು ಎಂದು ವರದಿ ಆಗಿದೆ.
‘ನಿನ್ನಿಂದ ಹೀಗೆಲ್ಲಾ ಆಯಿತು’ ಎಂದು ದರ್ಶನ್ ಕೂಗಾಡಿದ್ದರು ಎಂದು ವರದಿ ಆಗಿದೆ. ಹಲ್ಲೆಗೊಳಗಾದ ಪವಿತ್ರಾಗೆ ಬೆಂಗಳೂರಿನ ಆರ್ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸೋಮವಾರ (ಜೂನ್ 10) ಪವಿತ್ರಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾಗಿದೆ.
ಇನ್ನು ರೇಣುಕಾಸ್ವಾಮಿ ಕಿಡ್ನ್ಯಾಪ್ ಹಾಗೂ ಕೊಲೆ ಮಾಡಿದ ಈ ಕೇಸ್‌ನಲ್ಲಿ ನಟ ದರ್ಶನ್ ಸೇರಿ ಒಟ್ಟು 13 ಮಂದಿಯನ್ನ ಬಂಧನ ಮಾಡಲಾಗಿದೆ. ದರ್ಶನ್ ಅವರ ಜೊತೆಗೆ ಅರೆಸ್ಟ್ ಮಾಡಲಾಗಿರುವ 13 ಮಂದಿಯ ಮೇಲೂ ರೇಣುಕಾಚಾರ್ಯ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿದೆ.
ಬಂಧಿತರು ದರ್ಶನ್ ತೂಗುದೀಪ, ಪವಿತ್ರಾ ಗೌಡ, ವಿನಯ್ ವಿ,
ನಾಗರಾಜು ಆರ್, ಲಕ್ಷ್ಮಣ್ ಎಂ, ಪ್ರದೋಶ್ ಎಸ್, ಪವನ್ ಕೆ, ದೀಪಕ್ ಕುಮಾರ್ ಎಂ, ನಂದೀಶ್, ಕಾರ್ತಿಕ್, ನಿಖಿಲ್ ನಾಯಕ್, ರಾಘವೇಂದ್ರ @ ರಾಘು ಹಾಗು ಕೇಶವ ಮೂರ್ತಿ ಎಂದು ತಿಳಿದು ಬಂದಿದೆ.

