ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್ ಸಂಚಲನ ಸೃಷ್ಟಿಸುತ್ತಿರುವಾಗಲೇ ದರ್ಶನ್ ಅಭಿಮಾನಿಗಳ ಮತ್ತಷ್ಟು ವಿಡಿಯೋಗಳು ಬಹಿರಂಗವಾಗಿದೆ. ಇದೀಗ ನಟ ಡಾಲಿ ಧನಂಜಯ್ ಜೊತೆ ಇರುವ ಆರೋಪಿಗಳ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಅನ್ನು ಕಿಡ್ನಾಪ್ ಮಾಡಿದ್ದ ಆಟೋಗೆ ಡಾಲಿ ಧನಂಜಯ್ ಅವರು ದರ್ಶನ್ ಅವರ ಪೋಸ್ಟರ್ ಹಚ್ಚಿದ್ದಾರೆ. ಆರೋಪಿಗಳಾದ ಜಗ್ಗ @ ಜಗದೀಶ್, ಅನು @ ಅನುಕಿರಣ್ ಜೊತೆ ನಟ ಭಯಂಕರ ಡಾಲಿ ಧನಂಜಯ್ ಅವರು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಮಧ್ಯೆದಲ್ಲಿ ಆಟೋ ನಿಲ್ಲಿಸಿಕೊಂಡು ಡೆವಿಲ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಭಾಗಿಯಾದ ಆರೋಪಿಗಳು ಇದ್ದಾರೆ. ಡಾಲಿ ಧನಂಜಯ್ ಅವರು ಪೋಸ್ಟರ್ ಬಿಡುಗಡೆ ಮಾಡಿದ್ದ ಆಟೋದಲ್ಲೇ ಆರೋಪಿಗಳು ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ. ಡಾಲಿ ಪೋಸ್ಟರ್ ಬಿಡುಗಡೆ ಮಾಡಿದ್ದ ಈ ವಿಡಿಯೋ ವೈರಲ್ ಆಗಿದೆ.

