ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರಿಗೆ ಇಂದು 65ನೇ ಹುಟ್ಟುಹಬ್ಬದ ಸಂಭ್ರಮ. ಹಂಸಲೇಖ ಹಾಗೂ ರವಿಚಂದ್ರನ್‌ ಅವರ ಹಿಟ್‌ ಹಾಡುಗಳ ಸಮಾರಂಭ “ಕ್ರೇಜಿ ಬ್ರಹ್ಮ’ ನಡೆಯಲಿದೆ. ಇಬ್ಬರ ನಾಲ್ಕು ದಶಕಗಳ ಪಯಣವನ್ನು ಸಂಭ್ರಮಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ರವಿಚಂದ್ರನ್‌ ಹಾಗೂ ಹಂಸಲೇಖ ಜೋಡಿಯ ಕೆಲವು ಪ್ರಮುಖವಾದ ಹಾಡುಗಳನ್ನು ಹಾಡುವುದರ ಜೊತೆಗೆ ಮರುಸೃಷ್ಟಿ ಮಾಡಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಹಲವು ಜನಪ್ರಿಯ ಕಲಾವಿದರು ಭಾಗವಹಿಸುವುದರ ಜೊತೆಗೆ, ರವಿಚಂದ್ರನ್‌ ಅವರ ಜೊತೆಗೆ ನಟಿಸಿದ ಹಲವು ನಟಿಯರು ಭಾಗವಹಿಸಲಿದ್ದಾರೆ. ದೇಶದ ಜನಪ್ರಿಯ ಗಾಯಕರು ಹಾಡುಗಳನ್ನು ಹಾಡಲಿದ್ದಾರೆ.