ಇಲ್ಲಿನ ಪುತ್ತೂರಿನ ಬೊಳುವಾರು ನಿವಾಸಿ ಪ್ರಜ್ವಲ್ ಕೆರ್ಪೇ ಮಿಸ್ಟರ್ ಬೋರಿ ತುಳು ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಇವರು ಹಲವಾರು ಕಿರುಚಿತ್ರ ಮತ್ತುಆಲ್ಬಂ ಹಾಡುಗಳಲ್ಲಿ ಕೆಲಸ ಮಾಡಿದ್ದುಇವರು ನಿರ್ದೇಶಿಸಿದ ಮೌನ ಮಾತಾದಾಗ ಮತ್ತು ಓಂ ಸಾಯಿ ರಾಮ್ ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯಪ್ರಶಸ್ತಿಗಳ ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಈ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಇವರು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ನಲ್ಲಿಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು ಇವರಿಗೆ ಇನ್ನಷ್ಟು ಉತ್ತಮ ಅವಕಾಶಗಳು ಹುಡಿಕಿಕೊಂಡು ಬರಲಿ ಎಂದು ಆಶಿಸುತ್ತೇವೆ.