News Karnataka Kannada
Thursday, May 02 2024
ಕೋಸ್ಟಲ್ ವುಡ್

ಗಬ್ಬರ್ ಸಿಂಗ್ ತುಳು ಸಿನಿಮಾಕ್ಕೆ ಡಬ್ಬಿಂಗ್

Gabbar
Photo Credit : By Author

ಎರಡು ವರ್ಷಗಳ ಹಿಂದೆ ಮುತ್ತು ಗೋಪಾಲ ಫಿಲಂಸ್ ನಲ್ಲಿ ಬಾರ್ಕೂರು ಸತೀಶ್ ಪೂಜಾರಿ ನಿರ್ಮಾಣದಲ್ಲಿ ಪ್ರದೀಪ್ ಬೈಕಾಡಿ ನಿರ್ದೇಶನದಲ್ಲಿ ಮುಹೂರ್ತ ನಡೆದಿದ್ದ ಗಬ್ಬರ್ ಸಿಂಗ್ ಬಳಿಕ ಕೊರೊನಾ ಹಾವಳಿಯಿಂದ ಸಿನಿಮಾದ ಚಿತ್ರೀಕರಣ ಸ್ಥಗಿತಗೊಂಡಿತ್ತು.

ತದನಂತರ ಸಿನಿಮಾ ಚಿತ್ರಕಥೆಯಲ್ಲಿ ಸಮಗ್ರ ಬದಲಾವಣೆ ನಡೆಸಿ ಸಿನಿಮಾಕ್ಕೆ ಹೊಸ ಸ್ಪರ್ಶ ನೀಡಲು ನಿರ್ಮಾಪಕರು, ಮತ್ತು ನಿರ್ದೇಶಕರು ಮುಂದಾದರು. ಸದ್ಯ ಗಬ್ಬರ್ ಸಿಂಗ್ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡು, ಸಿನಿಮಾ ಈಗ ಡಬ್ಬಿಂಗ್ ಹಂತದಲ್ಲಿದೆ ಎಂದು ಸಿನಿಮಾ ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು ತಿಳಿಸಿದ್ದಾರೆ.

ಈ ಸಿನಿಮಾಕ್ಕೆ ೪೦ ದಿನಗಳ ಚಿತ್ರೀಕರಣ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬೇರೆ ಬೇರೆ ತಾಣಗಳಲ್ಲಿ ಗಬ್ಬರ್ ಸಿಂಗ್‌ಗೆ ಚಿತ್ರೀಕರಣ ನಡೆದಿದೆ.
ಬಹುವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಗಬ್ಬರ್ ಸಿಂಗ್‌ಗೆ ಉಗ್ರಂ ಖ್ಯಾತಿಯ ಸ್ಟಂಟ್ ಮಾಸ್ಟರ್ ಶಿವು ಅವರಿಂದ ನಾಲ್ಕು ಫೈಟ್ ಗಳನ್ನು ಕಂಪೋಸ್ ಮಾಡಿದ್ದಾರೆ. ರವಿ ಸುವರ್ಣ ಛಾಯಾಗ್ರಾಹಣ ಒದಗಿಸಿದ್ದಾರೆ. ಸಂಕಲನ ರಾಹುಲ್, ಸಂಗೀತ ಡೊಲ್ವಿನ್, ಪ್ರದೀಪ್ ಬೈಕಾಡಿ ಅವರ ನಿರ್ದೇಶನ ಇದೆ. ಅವರಿಗೆ ಸಹಾಯಕರಾಗಿ ಪುಷ್ಪರಾಜ್ ರೈ, ಜೈರಾಜ್ ದುಡಿದಿದ್ದಾರೆ. ಮೇಲ್ವಿಚರಾಕರಾಗಿ ಮಧು ಸುರತ್ಕಲ್ ದುಡಿದಿದ್ದಾರೆ.

ತಾರಾಗಣದಲ್ಲಿ ಶರಣ್ ಶೆಟ್ಟಿ, ವೆನ್ಸಿಟಾ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಗಿರೀಶ್ ಎಂ. ಶೆಟ್ಟಿ ಕಟೀಲು, ಉಮೇಶ್ ಮಿಜಾರ್, ಸಾಯಿಕೃಷ್ಣ ಕುಡ್ಲ, ಪ್ರಸಣ್ಣ ಶೆಟ್ಟಿ ಬೈಲೂರು, ರವಿರಾಮ ಕುಂಜ, ಚಂದ್ರಹಾಸ ಶೆಟ್ಟಿ ಮಾಣಿ, ವೀಣಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಪೂರ್ಣಿಮಾ ಶೆಟ್ಟಿ, ಪವಿತ್ರಾ ಶೆಟ್ಟಿ, ಆಶಾ ಶೆಟ್ಟಿ ಶಿಬರೂರು, ಉದಯ ಆಳ್ವ, ಪ್ರಜ್ವಲ್ ಪಾಂಡೇಶ್ವರ್ ಮೊದಲಾದವರು ತಾರಾಗಣದಲ್ಲಿದ್ದಾರೆ.

ಬಾರ್ಕೂರು ಸತೀಶ್ ಪೂಜಾರಿ ಸಿನಿಮಾ ನಿರ್ಮಾಣದ ಜೊತೆಗೆ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಬ್ಬರ್ ಸಿಂಗ್ ಸಿನಿಮಾ ಬೇರೆ ಬೇರೆ ಕಾರಣಗಳಿಂದ ಬಿಡುಗಡೆ ವಿಳಂಬವಾಗಿದೆ. ಈಗ ಡಬ್ಬಿಂಗ್ ನ ಕೊನೆಯ ಹಂತದಲ್ಲಿದ್ದು, ಸಿನಿಮಾವನ್ನು ೨೦೨೩ ರಲ್ಲಿ ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ನಿರ್ಮಾಪಕರಾದ ಸತೀಶ್ ಪೂಜಾರಿ ತಿಳಿಸಿದ್ದಾರೆ.

ಕಂಬಳಪ್ರಿಯ ನಾಯಕ ನಟ
ಗಬ್ಬರ್ ಸಿಂಗ್ ಸಿನಿಮಾದ ನಾಯಕ ನಟ ಶರಣ್ ಶೆಟ್ಟಿ ಕಂಬಳ ಪ್ರಿಯರಾಗಿದ್ದಾರೆ. ಮಾತ್ರವಲ್ಲ ಕಂಬಳದ ಕೋಣಗಳನ್ನು ಕಂಬಳದಲ್ಲಿ ಓಡಿಸಿ ಪ್ರಶಸ್ತಿ ಬಹುಮಾನ ಗೆದ್ದವರು. ಅಲ್ಲದೆ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದವರು. ಸಿನಿಮಾಕ್ಕೆ ಬೇಕಾದ ಕಟ್ಟುಮಸ್ತಾದ ದೇಹವನ್ನು ಹೊಂದಿರುವ ಅವರು ಸಿನಿಮಾಕ್ಕಾಗಿ ಪ್ರತೀದಿನ ವರ್ಕೌಟ್ ಮಾಡುತ್ತಿದ್ದಾರೆ. ಫೈಟ್, ಈಜು ಎಲ್ಲವನ್ನೂ ಕಲಿತುಕೊಂಡಿದ್ದಾರೆ. ಒಂದೆರಡು ತುಳು ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿರುವ ಶರಣ್ ಶೆಟ್ಟಿ ಅವರ ಕಂಬಳ ಪ್ರೇಮ ಮತ್ತು ಸಿನಿಮಾ ಆಸಕ್ತಿಯನ್ನು ನಿರ್ಮಾಪಕ ಸತೀಶ ಪೂಜಾರಿ ಅವರು ಗಮನಿಸಿ ಅವಕಾಶ ನೀಡಿದ್ದಾರೆ. ಈ ಮೂಲಕ ಶರಣ್ ಸಿನಿಮಾದಲ್ಲಿ ಉತ್ತಮ ಅವಕಾಶವನ್ನು ಪಡೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು