Categories: ಮನರಂಜನೆ

ರಕುಲ್ ಪ್ರೀತ್ ಸಿಂಗ್ ಮದುವೆ: ಪಟಾಕಿ ಸಿಡಿಸೋ ಬೇಡ ಎಂದ ನಟಿ

ಬೆಂಗಳೂರು: ನಟಿ ರಕುಲ್ ಪ್ರೀತ್ ಸಿಂಗ್  ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಮದುವೆ ಫೆಬ್ರವರಿ 21ರಂದು ಅದ್ದೂರಿಯಾಗಿ ನೆರವೇರಲಿದೆ.

ಗೋವಾದ ಸಮುದ್ರ ತೀರದಲ್ಲಿ ಇವರ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ. ಈಗಾಗಲೇ ಇವರ ಆಮಂತ್ರಣಪತ್ರ ವೈರಲ್ ಆಗಿದ್ದು, ಅದರಲ್ಲಿ ಸಮುದ್ರವನ್ನು ಕಾಣಬಹುದು. ಅವರ ಮದುವೆ ಸಂದರ್ಭದಲ್ಲಿ ಪಟಾಕಿ ಸಿಡಿಸೋ ಪದ್ಧತಿ ಬೇಡ ಎಂದು ರಕುಲ್ ಪ್ರೀತ್ ಸಿಂಗ್  ಹೇಳಿದ್ದು ಅವರ ನಿರ್ಧಾರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ದೊಡ್ಡ ಸೆಲೆಬ್ರಿಟಿಗಳ ಮದುವೆ ಎಂದರೆ ಅಲ್ಲಿ ಪಟಾಕಿ ಸಿಡಿಸೋದು ಇದ್ದೇ ಇರುತ್ತದೆ. ನಾನಾ ರೀತಿಯ ಪಟಾಕಿಗಳನ್ನು ಸಿಡಿಸಿ ಕಣ್ಣಿಗೆ ತಂಪು ನೀಡಲಾಗುತ್ತದೆ. ಈ ರೀತಿ ಪಟಾಕಿ ಸಿಡಿಸುವುದರಿಂದ ಗಾಳಿಗೆ ಸಾಕಷ್ಟು ವಿಷಾನಿಲಗಳು ಸೇರಿಕೊಳ್ಳುತ್ತವೆ. ಈ ಕಾರಣಕ್ಕೆ ಪಟಾಕಿ ಬೇಡ ಎಂದು ಅವರು ನಿರ್ಧರಿಸಿದ್ದಾರೆ.

ರಕುಲ್ ಅವರು ಯಾವುದೇ ಆಮಂತ್ರಣ ಪತ್ರವನ್ನು ಪ್ರಿಂಟ್ ಮಾಡಿಲ್ಲ. ಬದಲಿಗೆ ಡಿಜಿಟಲ್ ಆಮಂತ್ರಣಪತ್ರ ಸಿದ್ಧಪಡಿಸಿ ಅದನ್ನು ನೀಡಲಾಗಿದೆ.

ಊಟದ ವಿಚಾರದಲ್ಲೂ ಕೆಲವು ನಿಯಮಗಳನ್ನು ತರಲು ಅವರು ಮುಂದಾಗಿದ್ದಾರೆ. ಯಾರೂ ಊಟವನ್ನು ಚೆಲ್ಲದಂತೆ ವಿಶೇಷ ಸೂಚನೆ ಹಾಕಿಸಲು ನಿರ್ಧರಿಸಲಾಗಿದೆ.

Ashika S

Recent Posts

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು: ಪ್ರಹ್ಲಾದ್ ಜೋಶಿ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರ, ಸಂಪೂರ್ಣ ಈ ಕೇಸ್ ನಲ್ಲಿ ಅತ್ಯಂತ ಗೊಂದಲವಿದೆ. ನಮ್ಮ ಪಾರ್ಟಿ ಹಾಗೂ…

11 mins ago

ಬಿರುಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಅರಳಿ ಮರ: ನಾಲ್ಕು ಮನೆಗಳು ಜಖಂ

ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಅರಳಿ ಮರವೊಂದು ಬೇರು ಸಮೇತ ನಾಲ್ಕು ಮನೆಗಳ ಮೇಲೆ ಉರುಳಿ ಬಿದ್ದು ಮನೆಗಳು…

24 mins ago

ಕೇಜ್ರಿವಾಲ್‌ಗೆ ಷರತ್ತು ವಿಧಿಸಿ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…

48 mins ago

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

1 hour ago

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಶವ ಪತ್ತೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ ಶವವಾಗಿ ಪತ್ತೆಯಾಗಿದ್ದಾನೆ.

1 hour ago

ದಾಭೋಲ್ಕರ ಹತ್ಯೆ ಕೇಸ್ ನಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನ ಸಂಸ್ಥೆ ಸಂತಸ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಂದು ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ…

1 hour ago