ಮುಂಬೈ: ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಕಪೂರ್ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಮುಂಬೈನ ಗಿರ್ಗಾಂವ್ನಲ್ಲಿರುವ ಎಚ್.ಎನ್.ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಮಗುವಿಗೆ ಜನ್ಮ ನೀಡಿದ್ದಾರೆ.
ಆಲಿಯಾ-ರಣಬೀರ್ ಜೂನ್ ನಲ್ಲಿ ತಾವು ತಂದೆ – ತಾಯಿಯಾಗಲಿದ್ದೇವೆ ಎನ್ನುವ ಸಂತಸದ ವಿಷಯವನ್ನು ಫೋಟೋ ಹಂಚಿಕೊಂಡು ಹೇಳಿದ್ದರು.
‘ಗಂಗೂಬಾಯಿ ಕಾಥಿಯಾವಾಡಿ’ ಯಲ್ಲಿ ನಟಿಸಿ ಆಲಿಯಾ ಭಟ್ ಉತ್ತಮ ಖ್ಯಾತಿಯನ್ನು ಪಡೆದಿದ್ದರು.